.
.
.
ಉದ್ಯೋಗ ಸುದ್ದಿಗಳು
ಕರ್ನಾಟಕದಲ್ಲಿ ನಡೆಯುವ ಇನ್ನೂ ಹೆಚ್ಚಿನ ಉದ್ಯೋಗ ಸುದ್ದಿಗಳಿಗಾಗಿ, ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿರಿ: www.karemp.com .
ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಆಯ್ಕೆಪಟ್ಟಿ 402 ಸಿವಿಲ್ ಪೊಲೀಸ್ ನೇಮಕಾತಿ ಆಯ್ಕೆಪಟ್ಟಿ ಪ್ರಕಟ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 402 ಸಿವಿಲ್ ಪೊಲೀಸ್ ಸಬ್ ಇನ್ನೆಕ್ಟರ್ ಹುದ್ದೆಗಳ ನೇಮಕಾತಿಗೆ 03 ಮಾರ್ಚ್ 2021 ರಲ್ಲಿ ಅಧಿಸೂಚನೆಯನ್ನು ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಈ ಹಿಂದೆ ನಡೆಸಲಾಗಿತ್ತು ಇದೀಗ ಈ ಹುದ್ದೆಗಳ ನೇಮಕಾತಿ ಅಂತಿಮ ಆಯ್ಕೆಪಟ್ಟಿಯನ್ನು ಇಲಾಖೆಯು ಪ್ರಕಟಗೊಳಿಸಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://arc21.ksp-recruitment.in ಪ್ರವೇಶಿಸಿ ಆಯ್ಕೆಪಟ್ಟಿಯನ್ನು ನೋಡಬಹುದಾಗಿದೆ, (ಆದರೆ ಈ ಪ್ರಕ್ರಿಯೆ ಹೈಕೋರ್ಟ್/ಸರ್ವೋಚ್ಚ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವಾದ-ವಿವಾದಗಳ ಅಂತಿಮ ತೀರ್ಪುಗಳಿಗೆ ಒಳಪಟ್ಟಿರುತ್ತದೆ. ಪ್ರಕಟಿತ ಪಟ್ಟಿಗಳು ಇಲಾಖಾ ನಿಯಮಗಳು, ವರ್ಗ ಬದಲಾವಣೆ ಮತ್ತು ಬೃಂದ ಬದಲಾವಣೆಗಳ ಅನ್ವಯ ತಿದ್ದುಪಡಿಗೆ ಒಳಗಾಗಬಹುದಾಗಿಯೂ ತಿಳಿಸಲಾಗಿದೆ) ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://ksp.karnataka.gov.in ಭೇಟಿನೀಡಿರಿ. |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೇಮಕಾತಿ ಓಂಬುಡ್ಸ್ ಪರ್ಸನ್ ಹುದ್ದೆಗಳ ನೇಮಕಾತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಓಂಬುಡ್ಸ್ ಪರ್ಸನ್ ಹುದ್ದೆಗಳ ನೇಮಕಾತಿ ಕುರಿತು ಅಧಿಸೂಚನೆ ಪ್ರಕಟಿಸಿದೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸ್ವೀಕೃತವಾಗುವ ದೂರುಗಳ ವಿಲೇವಾರಿ ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವವರು ಮಾನ್ಯ ವಿಶ್ವವಿದ್ಯಾಲಯದಿಂದ ಪದವಿ, ಸೇವಾ ಅನುಭವ, ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ದೈಹಿಕ ಸಾಮರ್ಥ್ಯ ಹೊಂದಿರಬೇಕು.ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://rdpr.karnataka.gov.in ಪ್ರವೇಶಿಸಿ ಅರ್ಜಿ ಪಾರ್ಮ್ ಪಡೆದು ದಿನಾಂಕ 03 ಅಕ್ಟೋಬರ್ 2025ರ ಒಳಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಭೇಟಿನೀಡಿರಿ. |
ಗ್ರಾಮ ಒನ್ ತೆರೆಯಲು ಅರ್ಜಿ ಆಹ್ವಾನ ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಗ್ರಾಮ ಒನ್ ಕರ್ನಾಟಕ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಎಲ್ಲಾ ಇಲಾಖೆಗಳ ನಾಗರಿಕ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಸ್ವಂತ ಗ್ರಾಮದಲ್ಲಿ ತಲುಪಿಸುವ ಗುರಿಯನ್ನು ಹೊಂದಿರುವ ಯೋಜನೆಯಾಗಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ, ಪ್ರಸ್ತುತ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಉಡುಪಿ, ವಿಜಯನಗರ, ಯಾದಗಿರಿ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಡಿಪ್ಲೊಮಾ/ಐಟಿಐ/ಪಿಯುಸಿ II/ಪದವೀಧರರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಕನ್ನಡ, ಇಂಗ್ಲಿಷ್ ಎರಡರಲ್ಲೂ ಟೈಪಿಂಗ್ ಮಾಡಲು ಪರಿಣತಿ ಹೊಂದಿರಬೇಕು. ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ದಿನಾಂಕ 15 ಸೆಪ್ಟೆಂಬರ್ 2025ರ ಒಳಗೆ ಅರ್ಜಿ ಸಲ್ಲಿಸಬೇಕು, ಜಿಲ್ಲೆಯ ಯಾವ ಭಾಗದಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಯಲು ವೆಬ್‌ಸೈಟ್ https://kal-mys.gramaone.karnataka.gov.in ಭೇಟಿನೀಡಿ ಜಿಲ್ಲೆ-ತಾಲೂಕು-ಗ್ರಾಮ ಆಯ್ಕೆ ಮಾಡಿ ಮಾಹಿತಿ ತಿಳಿಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kal-mys.gramaone.karnataka.gov.in ಭೇಟಿನೀಡಿರಿ. |
ಕರ್ನಾಟಕ ಸರ್ಕಾರ ನೇಮಕಾತಿ ಕುರಿತು ಪ್ರಕಟಣೆ ಪ್ರಕಟಿಸಿದೆ ಒಳ ಮೀಸಲಾತಿ ಜಾರಿ: ಅಕ್ಟೋಬರ್ 28 ನಂತರದ ನೇಮಕಾತಿ ರದ್ದು ರಾಜ್ಯ ಸರ್ಕಾರವು ಒಳ ಮೀಸಲಾತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು, 2024 ಅಕ್ಟೋಬರ್ 28 ನಂತರ ಹೊರಬಂದ ಮತ್ತು ನಿಯಮ ಪಾಲಿಸದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ತಕ್ಷಣದಿಂದ ರದ್ದುಗೊಳಿಸಿದೆ. ಡಿಪಿಎಆರ್ ಸುತ್ತೋಲೆಯಲ್ಲಿ, ಕ್ರೀಡಾಪಟುಗಳಿಗೆ 2% ಮೀಸಲಾತಿಯನ್ನೂ ಸೇರಿಸಿ ಹೊಸ ಅಧಿಸೂಚನೆಗಳನ್ನು ಬೇಗ ಹೊರಡಿಸಿ, ಕಾಲಮಿತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅಭ್ಯರ್ಥಿಗಳ ಮನವಿಯ ಹಿನ್ನೆಲೆ, ಕೆಪಿಎಸ್‌ಸಿ ಕೃಷಿ ಇಲಾಖೆಯ 945 ಬಿ ವರ್ಗ ಹುದ್ದೆಗಳ ಪರೀಕ್ಷೆಗಳನ್ನು ಮುಂದೂಡಿದೆ; ಪ್ರವೇಶಪತ್ರಗಳು ಹೊರಬಂದಿದ್ದರೂ ದಿನಾಂಕಗಳನ್ನು ಸ್ಥಗಿತಗೊಳಿಸಲಾಗಿದೆ. ಪರೀಕ್ಷಾರ್ಥಿಗಳು ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಿತ ಸಚಿವರನ್ನು ಭೇಟಿ ಮಾಡಿ ಒಳ ಮೀಸಲಾತಿ ಅನ್ವಯವಾಗುವಂತೆ ಮನವಿ ಸಲ್ಲಿಸಿದ್ದನ್ನು ಸರ್ಕಾರ ಪರಿಗಣಿಸಿದೆ. ಒಳ ಮೀಸಲಾತಿ ಸರಿಯಾಗಿ ಅನ್ವಯಿಸಲಾಗದ ಹಿನ್ನೆಲೆ ಪಾರದರ್ಶಕತೆ ಮತ್ತು ಸಾಮಾಜಿಕ ನ್ಯಾಯ ಖಾತ್ರಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೃಷಿ ಇಲಾಖೆಗೆ ಮಾತ್ರವಲ್ಲ, ಇತರ ಇಲಾಖೆಗಳ ಮೇಲೂ ಪರಿಣಾಮ ಬೀರಲಿದೆ; ಹೊಸ ನಿಯಮಗಳಿಗೆ ಅನುಗುಣವಾಗಿ ವೇಳಾಪಟ್ಟಿಗಳು ಪುನರ್ ನಿಗದಿಯಾಗಲಿವೆ. ಶೀಘ್ರದಲ್ಲೇ ಹೊಸ ಅಧಿಸೂಚನೆಗಳು ಪ್ರಕಟವಾಗಲಿವೆ. |
ಎಲ್ಐಸಿ ಹೌಸಿಂಗ್ ಫೈನಾನ್ಸ್ ನೇಮಕಾತಿ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ 28 ಅಪ್ರೆಂಟಿಸ್ ನೇಮಕಾತಿ ಎಲ್ಐಸಿ ಹೌಸಿಂಗ್ ಫೈನಾನ್ಸ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ 28 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಸೇರಿದಂತೆ ದೇಶಾದ್ಯಂತ ಒಟ್ಟು 192 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಯಾವುದೇ ಪದವಿ ಪಡೆದಿರಬೇಕು (01-ಸೆಪ್ಟೆಂಬರ್-20215 ರಿಂದ 01-ಸೆಪ್ಟೆಂಬರ್ 2025 ರ ಅವಧಿಯಲ್ಲಿ), 20 ರಿಂದ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ, ಸ್ಪರ್ಧಾತ್ಮಕ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುವುದು, ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ದಿನಾಂಕ 22 ಸೆಪ್ಟೆಂಬರ್ 2025ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.lichousing.com ಬೇಟಿನೀಡಿರಿ. (ಸೂಚನೆ:- ಈ ನೇಮಕಾತಿಯು ಖಾಯಂ ನೇಮಕಾತಿಯಾಗಿರುವುದಿಲ್ಲ ಅಪ್ರೆಂಟಿಸ್ ನೇಮಕಾತಿಯು ತರಬೇತಿಯಾಗಿದ್ದು ತರಬೇತಿ ಮುಗಿಯುವವರೆಗೆ ₹ 12000 ಪ್ರತಿ ತಿಂಗಳು ಸಂಭಾವನೆ ನೀಡಲಾಗುವುದು). |
ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಕರ್ನಾಟಕ ರಾಜ್ಯ ಪೊಲೀಸ್—ಕರಾವಳಿ ಭದ್ರತಾ ಪೊಲೀಸರು (CSP), ಉಡುಪಿ ಕಚೇರಿಯಿಂದ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, 5 ವರ್ಷಗಳ ಗುತ್ತಿಗೆ ಆಧಾರದಲ್ಲಿ ಒಟ್ಟು 54 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳು: Motor Launch Engineer (PI), Boat Captain (PSI), Assistant Boat Captain (ASI), Motor Launch Mechanic (ASI), Engine Driver (HC) ಮತ್ತು Khalasi (PC). ಅರ್ಜಿ ಸಲ್ಲಿಸಲು ನಿವೃತ್ತ ನೌಕಾಪಡೆ/ಕೋಸ್ಟ್ ಗಾರ್ಡ್/BSF (Water Wing) ಅಧಿಕಾರಿ/ಸಿಬ್ಬಂದಿ, ಗರಿಷ್ಠ ವಯಸ್ಸು 58 ವರ್ಷ, ಕನಿಷ್ಠ 5 ವರ್ಷಗಳ ಮೆರೈನ್ ಅನುಭವ ಹಾಗೂ ಹುದ್ದೆಗನುಗುಣ ಪ್ರಮಾಣಪತ್ರಗಳು ಮತ್ತು ಕನ್ನಡ ಓದು-ಬರೆ-ಮಾತನಾಡುವ ಸಾಮರ್ಥ್ಯ ಹೊಂದಿರಬೇಕು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ. ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಕರಾವಳಿ ಭದ್ರತಾ ಪೊಲೀಸ್, ಉಡುಪಿ ಮೇಲ್ವಿಚಾರಕ ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಬೇಕು. ಅರ್ಜಿಯ ಮಾದರಿ ಮತ್ತು ಬೇಕಾಗುವ ದಾಖಲೆಗಳ ವಿವರ ಪ್ರಕಟಣೆಯಲ್ಲಿದೆ. ಕೊನೆಯ ದಿನಾಂಕ 30 ಸೆಪ್ಟೆಂಬರ್ 2025; ಆಯ್ಕೆ ವಿಶೇಷ ಸಮಿತಿಯ ಸಂದರ್ಶನದ ಮೂಲಕ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://ksp.karnataka.gov.in ಭೇಟಿನೀಡಿರಿ. |
ರೈಲ್ವೆ ನೇಮಕಾತಿ ಮಂಡಳಿ 368 ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ನೇಮಕಾತಿ ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುವುದರ ಕುರಿತು ಪತ್ರಿಕಾ ಪ್ರಕಟಣೆ ಪ್ರಕಟಿಸಿದೆ, ಬೆಂಗಳೂರು ರೈಲ್ವೆ ಸೇರಿದಂತೆ ದೇಶಾದ್ಯಂತ ವಿವಿಧ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ 368 ಸೆಕ್ಷನ್ ಕಂಟ್ರೋಲರ್ ಹುದ್ದೆಗಳು, ಅರ್ಜಿ ಸಲ್ಲಿಸಲು ಪದವಿ ಪಡೆದಿರಬೇಕು. ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ 20 ರಿಂದ 33 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ(ಮೀಸಲಾತಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗುವುದು) ನೇಮಕಾತಿಗೆ ಅಧಿಸೂಚನೆಯನ್ನು15 ಸೆಪ್ಟೆಂಬರ್ 2025ರಂದು ಪ್ರಕಟಿಸಲಾಗುತ್ತದೆ, ನೇಮಕಾತಿ ಅಧಿಸೂಚನೆಯನ್ನು ಶೀಘ್ರದಲ್ಲಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.rrbbnc.gov.in ಭೇಟಿನೀಡಿರಿ. |
ಕೆ-ಸೆಟ್ 2025 ಕೆ-ಸೆಟ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ, ಅರ್ಜಿ ಸಲ್ಲಿಸಲು ಸ್ನಾತಕೋತ್ತರ ಪದವಿ ಪಡೆದಿರಬೇಕು, ಗರಿಷ್ಠ ವಯೋಮಿತಿ ನಿಗದಿಪಡಿಸಿರುವುದಿಲ್ಲ, ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ ಮತ್ತು 3ಎ, 3ಬಿ ಅಭ್ಯರ್ಥಿಗಳಿಗೆ 1,000 ರೂ. ಹಾಗೂ ಪ್ರವರ್ಗ-1, ಪರಿಶಿಷ್ಟ ಜಾತಿ, ಪಂಗಡ, ಅಂಗವಿಕಲರು ಮತ್ತು ತೃತೀಯ ಲಿಂಗಿಗಳಿಗೆ 700 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ https://cetonline.karnataka.gov.in/kea/ ಪ್ರವೇಶಿಸಿ ದಿನಾಂಕ 18 ಸೆಪ್ಟೆಂಬರ್ 2025ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ https://cetonline.karnataka.gov.in/kea/ ಬೇಟಿನೀಡಿರಿ. |
ಕೆಪಿಎಸ್ಸಿ ನೇಮಕಾತಿ ಗ್ರೂಪ್ ಸಿ ಹುದ್ದೆಗಳ ನೇಮಕಾತಿ ಪರೀಕ್ಷೆ ಕೀ ಉತ್ತರ ಪ್ರಕಟ ಕರ್ನಾಟಕ ಲೋಕಸೇವ ಆಯೋಗ ರಾಜ್ಯದಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಾದ (ಪದವಿಮಟ್ಟದ ಉಳಿಕೆಮೂಲವೃಂದದ) ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ 50 ಹುದ್ದೆಗಳು ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ 10 ಹುದ್ದೆಗಳ ನೇಮಕಾತಿಗೆ ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು 13 ಜುಲೈ 2025ರಂದು ನಡೆಸಲಾಗಿತ್ತು ಇದೀಗ ಪರೀಕ್ಷೆಯ ಕೀ ಉತ್ತರ ಪ್ರಕಟಿಸಿದೆ, ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 20 ಆಗಸ್ಟ್ 2025ರ ಒಳಗೆ ಅಂಚೆ ಮೂಲಕ ಸಲ್ಲಿಸಬಹುದಾಗಿದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ www.kpsc.kar.nic.in ಬೇಟಿನೀಡಿರಿ. |
ಕೆಪಿಎಸ್ಸಿ ನೇಮಕಾತಿ ಪಿಡಿಒ ಹುದ್ದೆಗಳ ನೇಮಕಾತಿ ದಾಖಲೆ ಪರಿಶೀಲನೆ ಪಟ್ಟಿ ಪ್ರಕಟ ಕರ್ನಾಟಕ ಲೋಕಸೇವಾ ಆಯೋಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹೈದರಾಬಾದ್-ಕರ್ನಾಟಕ ವೃಂದದ 97 ಹುದ್ದೆಗಳ ಭರ್ತಿಮಾಡಲು ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನವೆಂಬರ್ 2024ರಲ್ಲಿ ನಡೆಸಲಾಗಿತ್ತು ಇದೀಗ ಮೂಲ ದಾಖಲೆಗಳ ಪರಿಶೀಲನೆಗೆ (1:3) ಅರ್ಹರಾದ 284 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ ಮತ್ತು ದಾಖಲೆ ಪರಿಶೀಲನೆ ದಿನಾಂಕ ಸಮಯದ ಕುರಿತು ಅಧಿಕೃತ ವೆಬ್-ಸೈಟ್ ನಲ್ಲಿ ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ತಿಳಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ www.kpsc.kar.nic.in ಪ್ರವೇಶಿಸಿ ಅಥವಾ ಕೆಳಗಿನ ಲಿಂಕ್ ಕ್ಲಿಕ್ಕಿಸಿ ದಾಖಲೆ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ ಬೇಟಿನೀಡಿರಿ. |
ಕೆಪಿಟಿಸಿಎಲ್ ನೇಮಕಾತಿ ಕಿರಿಯ ಪವರ್ ಮ್ಯಾನ್ ಹುದ್ದೆಗಳ ಆಯ್ಕೆ ಪಟ್ಟಿ ಪ್ರಕಟ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) 2760 ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ ಅಕ್ಟೋಬರ್ 2024 ರಲ್ಲಿ ಅರ್ಜಿ ಆಹ್ವಾನಿಸಿ ಅರ್ಹ ಅಭ್ಯಥಿಗಳಿಗೆ ಸಹನಶಕ್ತಿ ಪರೀಕ್ಷೆಯನ್ನು ಮೇ 2025ರಲ್ಲಿ ನಡೆಸಲಾಗಿತ್ತು ಇದೀಗ ಉಳಿಕೆ ಮೂಲ ವೃಂದದ ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮ್ಯಾನ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ ಮತ್ತು ಕಲ್ಯಾಣ ಕರ್ನಾಟಕ ಜೂನಿಯರ್ ಸ್ಟೇಷನ್ ಅಟೆಂಡೆಂಟ್ (ಕ.ಕ) ಮತ್ತು ಜೂನಿಯರ್ ಪವರ್‌ಮ್ಯಾನ್(ಕ.ಕ) ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://kptcl.karnataka.gov.in ಪ್ರವೇಶಿಸಿ ಆಯ್ಕೆಪಟ್ಟಿ ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಭೇಟಿನೀಡಿರಿ. |
ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಕೆಪಿಎಸ್‌ಸಿ 78 ಎಸ್‌ಡಿಎ ನೇಮಕಾತಿ ಹೆಚ್ಚುವರಿ ಪಟ್ಟಿ ಪ್ರಕಟ ಕರ್ನಾಟಕ ಲೋಕಸೇವಾ ಆಯೋಗ ರಾಜ್ಯದ ವಿವಿಧ ನ್ಯಾಯಾಂಗ ಘಟಕಗಳಲ್ಲಿ ಖಾಲಿ ಇರುವ 575 (494+81 HK) ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಫೆಬ್ರವರಿ 2019ರಲ್ಲಿ ಅರ್ಜಿ ಆಹ್ವಾನಿಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಜೂನ್ 2019ರಲ್ಲಿ ನಡೆಸಿ ಅಂತಿಮ ನೇಮಕಾತಿ ಪಟ್ಟಿಯನ್ನು ಈ ಹಿಂದೆ ಪ್ರಕಟಗೊಳಿಸಿತ್ತು, ಇದೀಗ ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಿದೆ, ಹೈದ್ರಾಬಾದ್ ಕರ್ನಾಟಕ ವೃಂದದ 14 ಹುದ್ದೆಗಳು ಮತ್ತು ಉಳಿಕೆ ಮೂಲ ವೃಂದದ 64 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ ಪಟ್ಟಿಯನ್ನು ಆಯೋಗವು ವೆಬ್‌ಸೈಟ್ ನಲ್ಲಿ ಪ್ರಕಟಿಸಿದೆ, ಮತ್ತು ನಿಯಮಾನುಸಾರ 10% ಹೈದ್ರಾಬಾದ್ ಕರ್ನಾಟಕ ವೃಂದದ ಹೆಚ್ಚುವರಿ ಪಟ್ಟಿಯನ್ನೂ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.kpsc.kar.nic.in ಬೇಟಿನೀಡಿರಿ. |
ಕಾಲೇಜು ಶಿಕ್ಷಣ ಇಲಾಖೆ ನೇಮಕಾತಿ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸ್ನಾತಕೋತ್ತರ ಪದವಿ ಪಡೆದಿರಬೇಕು, ಹುದ್ದೆಗಳ ಸಂಖ್ಯೆಯನ್ನು ನಂತರ ಪ್ರಕಟಿಸಲಾಗುವುದು, ಹೆಚ್ಚುವರಿ ವಿದ್ಯಾರ್ಹತೆ ಮತ್ತು ಅನುಭವ ಇತರ ಮಾಹಿತಿಗೆ ಅಧಿಸೂಚನೆ ಗಮನಿಸಿ, ಮೆರಿಟ್ ಪಟ್ಟಿ ತಯಾರಿಸಿ ನೇಮಕಾತಿ ಮಾಡಲಾಗುವುದು, ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ದಿನಾಂಕ 05 ಆಗಸ್ಟ್ 2025ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ನೇಮಕಾತಿಯ ಕುರಿತು ಸಂಪೂರ್ಣ ಮಾಹಿತಿಗೆ ಅಧಿಕೃತ ವೆಬ್-ಸೈಟ್ https://dce.karnataka.gov.in ಬೇಟಿನೀಡಿರಿ. |
ಕೆಪಿಎಸ್ಸಿ ನೇಮಕಾತಿ ಕೆಪಿಎಸ್‌ಸಿ ಗ್ರೂಪ್ ‘ಸಿ’ ಹುದ್ದೆಗಳ ಪರೀಕ್ಷೆ ವೇಳಾಪಟ್ಟಿ ಪ್ರಕಟ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಉಳಿಕೆ ಮೂಲ ವೃಂದದ ಗ್ರೂಪ್ ‘ಸಿ’ ಹುದ್ದೆಗಳಾದ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ 300 ಹುದ್ದೆಗಳು ಮತ್ತು ಸಾರ್ವಜನಿಕ ಗ್ರಂಥಾಲಯದಲ್ಲಿ ಖಾಲಿ ಇರುವ ಸಹಾಯಕ ಗ್ರಂಥಪಾಲಕ 13 ಹುದ್ದೆಗಳಿಗೆ ದಿನಾಂಕ 15 ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕನ್ನಡ ಭಾಷಾ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದೆ, ದಿನಾಂಕ 16 ಆಗಸ್ಟ್ 2025ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲು ನಿಗದಿಪಡಿಸಿ ಪ್ರಕಟಣೆ ಪ್ರಕಟಿಸಲಾಗಿದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ https://kpsc.kar.nic.in ಬೇಟಿನೀಡಿರಿ. |
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೀ ಉತ್ತರ ಪ್ರಕಟ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಸರ್ಕಾರ ವಿವಿಧ ನೇಮಕಾತಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಿಂದುಳಿದ ವರ್ಗ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್/ ಗ್ರೂಪ್ ಸಿ/ ಆರ್ ಆರ್ ಬಿ/ ಎಸ್ ಎಸ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಿ ಅಭ್ಯರ್ಥಿಗಳ ನಿಯೋಜಿಸುವ ಸಂಬಂಧ ದಿನಾಂಕ 19 ಜುಲೈ 2025 ಪ್ರವೇಶ ಪರೀಕ್ಷೆ ನಡೆಸಿ ಈ ಹಿಂದೆ ತಾತ್ಕಾಲಿಕ ಕೀ ಉತ್ತರ ಪ್ರಕಟಿಸಲಾಗಿತ್ತು ಇದೀಗ ಅಂತಿಮ ಕೀ ಉತ್ತರ ಪ್ರಕಟಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ಕೀ ಉತ್ತರ ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea ಭೇಟಿನೀಡಿರಿ. |
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸಂಘ ನೇಮಕಾತಿ 35 ಶುಶ್ರೂಷಕರು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಮೈಸೂರು ಜಿಲ್ಲೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೈಸೂರು ಜಿಲ್ಲೆಯ ವೈದ್ಯಕೀಯ ಕಾಲೇಜಿನ ಖಾಲಿ ಇರುವ 35 ಶುಶ್ರೂಷಕರು ಹುದ್ದೆಗಳನ್ನು ಗುತ್ತಿಗೆ ಆಧಾರದಮೇಲೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಸಂಸ್ಥೆಯಿಂದ ಜಿ.ಎನ್.ಎಂ/ ಬಿ.ಎಸ್.ಸಿ ನರ್ಸಿಂಗ್ ಪದವಿ ಹೊಂದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೊಂದಣಿಯಾಗಿರಬೇಕು, ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 29 ಜುಲೈ 2025ರಂದು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಕಛೇರಿ ಮೈಸೂರು ಜಿಲ್ಲೆ ಇಲ್ಲಿ ಬೆಳಿಗ್ಗೆ 10:30ಕ್ಕೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://mysore.nic.in ಭೇಟಿ ನೀಡಿರಿ. |
ಕೆಪಿಎಸ್ಸಿ ನೇಮಕಾತಿ ಗ್ರೂಪ್ ‘ಸಿ’ ನೇಮಕಾತಿ ಕೀ ಉತ್ತರ ಪ್ರಕಟ ಕರ್ನಾಟಕ ಲೋಕ ಸೇವಾ ಆಯೋಗ ಉಳಿಕೆ ಮೂಲ ವೃಂದದ 313 ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿಗೆ ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮಾರ್ಚ್ 2025ರಲ್ಲಿ ನಡೆಸಿ ತಾತ್ಕಾಲಿಕ ಕೀ ಉತ್ತರನ್ನು ಈ ಹಿಂದೆ ಪ್ರಕಟಿಸಲಾಗಿತ್ತು ಇದೀಗ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಕೀ ಉತ್ತರವನ್ನು ಆಯೋಗವು ಪ್ರಕಟಿಸಿದೆ ಮತ್ತು ಕರ್ನಾಟಕ ಲೋಕ ಸೇವಾ ಆಯೋಗ ಉಳಿಕೆ ಮೂಲ ವೃಂದದ 70 ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳ ನೇಮಕಾತಿಗೆ ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮೇ 2025ರಲ್ಲಿ ನಡೆಸಿ ತಾತ್ಕಾಲಿಕ ಕೀ ಉತ್ತರನ್ನು ಈ ಹಿಂದೆ ಪ್ರಕಟಿಸಲಾಗಿತ್ತು ಇದೀಗ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಕೀ ಉತ್ತರವನ್ನು ಆಯೋಗವು ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kpsc.kar.nic.in ಭೇಟಿನೀಡಿರಿ. |
ರೈಲ್ವೆ ನೇಮಕಾತಿ ಮಂಡಳಿ ನೇಮಕಾತಿ 434 ಹುದ್ದೆಗಳ ನೇಮಕಾತಿ ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ರೈಲ್ವೆ ಪ್ಯಾರಾಮೆಡಿಕಲ್ 434 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುವುದರ ಕುರಿತು ಪತ್ರಿಕಾ ಪ್ರಕಟಣೆ ಪ್ರಕಟಿಸಿದೆ, ಬೆಂಗಳೂರು ರೈಲ್ವೆ ಸೇರಿದಂತೆ ದೇಶಾದ್ಯಂತ ವಿವಿಧ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ನರ್ಸಿಂಗ್ ಹುದ್ದೆಗಳು, ಸೂಪರಿಂಟೆಂಡೆಂಟ್ ಹುದ್ದೆಗಳು, ಡಯಾಲಿಸಿಸ್ ತಂತ್ರಜ್ಞ ಹುದ್ದೆಗಳು, ಆರೋಗ್ಯ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ ಹುದ್ದೆಗಳು, ಔಷಧಿಕಾರ ಹುದ್ದೆಗಳು, ರೇಡಿಯೋಗ್ರಾಫರ್ ಎಕ್ಸ್-ರೇ ತಂತ್ರಜ್ಞ ಹುದ್ದೆಗಳು, ಇಸಿಜಿ ತಂತ್ರಜ್ಞ ಹುದ್ದೆಗಳು, ಲಾಬ್ ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು 09 ಆಗಸ್ಟ್ 2025ರಂದು ಪ್ರಕಟಿಸಲಾಗುತ್ತದೆ, ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಜಿಎನ್‌ಎಂ/ಬಿ.ಎಸ್ಸಿ ನರ್ಸಿಂಗ್/ ಪದವಿ / ಫಾರ್ಮಸಿಯಲ್ಲಿ ಡಿಪ್ಲೊಮಾ/ ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ /ರಸಾಯನಶಾಸ್ತ್ರದಲ್ಲಿ ಬಿ.ಎಸ್ಸಿ/ ಡಿಎಂಎಲ್ಟಿ / ಬಿ.ಎಸ್ಸಿ ಮತ್ತು ಹಿಮೋಡಯಾಲಿಸಿಸ್‌ನಲ್ಲಿ ಡಿಪ್ಲೊಮಾ/ ಸಂಬಂಧಿತ ವಿಭಾಗದಲ್ಲಿ ಪದವಿ / ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು, ನೇಮಕಾತಿ ಅಧಿಸೂಚನೆಯನ್ನು ಶೀಘ್ರದಲ್ಲಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.rrbbnc.gov.in ಭೇಟಿನೀಡಿರಿ. |
ಕಂದಾಯ ಆಯುಕ್ತಾಲಯ ನೇಮಕಾತಿ ಲಾ ಕ್ಲರ್ಕ್/ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಕಂದಾಯ ಆಯುಕ್ತಾಲಯ ಕಾನೂನು ಕೋಶ ವಿಭಾಗಕ್ಕೆ 04 ಲಾ ಕ್ಲರ್ಕ್/ಅಸಿಸ್ಟೆಂಟ್ ಹುದ್ದೆಗಳ ತಾತ್ಕಾಲಿಕ ಒಪ್ಪಂದದ ಆಧಾರದಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಲಾ ಇಂಟರ್ನ್ ಅಥವಾ ಕಾನೂನು ಪದವಿ ಪಡೆದಿರಬೇಕು, ಮಾಸಿಕ ವೇತನ 20000 ರೂ ನೀಡಲಾಗುವುದು, ಆಸಕ್ತ ಅರ್ಹ ಅಭ್ಯರ್ಥಿಗಳು ಕಂದಾಯ ಆಯುಕ್ತಾಲಯ ಕಾರ್ಯಾಲಯಕ್ಕೆ ದಿನಾಂಕ 31 ಜುಲೈ 2025ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ: 080-22032691 ಸಂಪರ್ಕಿಸಿ ಅಥವಾ ಕಂದಾಯ ಆಯುಕ್ತಾಲಯ 711, 7ನೇ ಮಹಡಿ, 2ನೇ ಗೇಟ್, ಬಹುಮಹಡಿಗಳ ಕಟ್ಟಡ, ಡಾ.ಬಿ.ಆರ್ ಅಂಬೇಡ್ಕರ್ ವೀದಿ, ಬೆಂಗಳೂರು 560001 ಕಛೇರಿ ಬೇಟಿ ನೀಡಿರಿ. |
ಕೆಪಿಟಿಸಿಎಲ್ ನೇಮಕಾತಿ ಕಿರಿಯ ಪವರ್ ಮ್ಯಾನ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) 2760 ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ ಅಕ್ಟೋಬರ್ 2024 ರಲ್ಲಿ ಅರ್ಜಿ ಆಹ್ವಾನಿಸಿ ಅರ್ಹ ಅಭ್ಯಥಿಗಳಿಗೆ ಸಹನಶಕ್ತಿ ಪರೀಕ್ಷೆಯನ್ನು ಮೇ 2025ರಲ್ಲಿ ನಡೆಸಲಾಗಿತ್ತು ಇದೀಗ ಕಲ್ಯಾಣ ಕರ್ನಾಟಕ ಜೂನಿಯರ್ ಸ್ಟೇಷನ್ ಅಟೆಂಡೆಂಟ್ (ಕ.ಕ) ಮತ್ತು ಜೂನಿಯರ್ ಪವರ್‌ಮ್ಯಾನ್(ಕ.ಕ) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://kptcl.karnataka.gov.in ಬೇಟಿನೀಡಿರಿ ಆಯ್ಕೆಪಟ್ಟಿ ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಭೇಟಿನೀಡಿರಿ. |
ಕೆಪಿಎಸ್ಸಿ ನೇಮಕಾತಿ ಗ್ರೂಪ್ ಬಿ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಪ್ರವೇಶ ಪತ್ರ ಕರ್ನಾಟಕ ಲೋಕಸೇವ ಆಯೋಗ ರಾಜ್ಯದಲ್ಲಿ ಖಾಲಿ ಇರುವ ಗ್ರೂಪ್ ಬಿ ಹುದ್ದೆಗಳಾದ ಭೂ ವಿಜ್ಞಾನಿ ಹುದ್ದೆಗಳು, ಸಹಾಯಕ ನಿರ್ದೇಶಕರು ಹುದ್ದೆಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹುದ್ದೆಗಳು, ಸಹಾಯಕ ಇಂಜಿನಿಯರ್, ಕಾರ್ಖಾನೆ ನಿರ್ದೇಶಕರು, ಕಲ್ಯಾಣಾಧಿಕಾರಿಗಳು ಹುದ್ದೆಗಳು ಸೇರಿದಂತೆ ಒಟ್ಟು 50 ಹೈದರಾಬಾದ್ ಕರ್ನಾಟಕ ವೃಂದ ಹುದ್ದೆಗಳ ನೇಮಕಾತಿಗೆ ಏಪ್ರಿಲ್ 2024ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಈ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 26 ಜುಲೈ 2025ರಂದು ನಡೆಸಲು ನಿಗದಿಪಡಿಸಿ ಪ್ರವೇಶಪತ್ರವನ್ನು ಬಿಡುಗಡೆಮಾಡಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://kpsc.kar.nic.in ಪ್ರವೇಶಿಸಿ ಪ್ರವೇಶ ಪತ್ರ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kpsc.kar.nic.in ಭೇಟಿನೀಡಿರಿ. |
ಕೆಪಿಎಸ್ಸಿ ನೇಮಕಾತಿ ಗ್ರೂಪ್ ಸಿ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಪ್ರವೇಶ ಪತ್ರ ಕರ್ನಾಟಕ ಲೋಕಸೇವ ಆಯೋಗ ರಾಜ್ಯದಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಾದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ 50 ಹುದ್ದೆಗಳು ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ 10 ಹುದ್ದೆಗಳ ನೇಮಕಾತಿಗೆ ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆ ಪ್ರವೇಶ ಪತ್ರವನ್ನು ಪ್ರಕಟಿಸಿದೆ, 12, 13 ಜುಲೈ 2025ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ನಿಗದಿಪಡಿಸಿ ಪರೀಕ್ಷೇಯ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ, ಅಭ್ಯರ್ಥಿಯು ಅಧಿಕೃತ ವೆಬ್‌ಸೈಟ್ https://www.kpsc.kar.nic.in ಭೇಟಿ ನೀಡಿ ಅಪ್ಲಿಕೇಶನ್ ಐಡಿ ಮತ್ತು ಜನ್ಮದಿನಾಂಕ ನಮೂದಿಸಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಬಹುದಾಗಿದೆ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ www.kpsc.kar.nic.in ಬೇಟಿನೀಡಿರಿ. |
ಗ್ರಾಮ ಒನ್ ತೆರೆಯಲು ಅರ್ಜಿ ಆಹ್ವಾನ ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಗ್ರಾಮ ಒನ್ ಕರ್ನಾಟಕ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಎಲ್ಲಾ ಇಲಾಖೆಗಳ ನಾಗರಿಕ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಸ್ವಂತ ಗ್ರಾಮದಲ್ಲಿ ತಲುಪಿಸುವ ಗುರಿಯನ್ನು ಹೊಂದಿರುವ ಯೋಜನೆಯಾಗಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ, ಪ್ರಸ್ತುತ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕಲಬುರಗಿ, ಕೊಡಗು, ಮಂಡ್ಯ, ಮೈಸೂರು, ಯಾದಗಿರಿ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಡಿಪ್ಲೊಮಾ/ಐಟಿಐ/ಪಿಯುಸಿ II/ಪದವೀಧರರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಕನ್ನಡ, ಇಂಗ್ಲಿಷ್ ಎರಡರಲ್ಲೂ ಟೈಪಿಂಗ್ ಮಾಡಲು ಪರಿಣತಿ ಹೊಂದಿರಬೇಕು. ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ದಿನಾಂಕ 15 ಜುಲೈ 2025ರ ಒಳಗೆ ಅರ್ಜಿ ಸಲ್ಲಿಸಬೇಕು, ಜಿಲ್ಲೆಯ ಯಾವ ಭಾಗದಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಯಲು ವೆಬ್‌ಸೈಟ್ https://kal-mys.gramaone.karnataka.gov.in ಭೇಟಿನೀಡಿ ಜಿಲ್ಲೆ-ತಾಲೂಕು-ಗ್ರಾಮ ಆಯ್ಕೆ ಮಾಡಿ ಮಾಹಿತಿ ತಿಳಿಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kal-mys.gramaone.karnataka.gov.in ಭೇಟಿನೀಡಿರಿ. |
ಕೆಪಿಎಸ್ಸಿ ನೇಮಕಾತಿ 386 ಭೂಮಾಪಕರ ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ತಡೆ ಕರ್ನಾಟಕ ಲೋಕ ಸೇವಾ ಆಯೋಗ, ಭೂಮಾಪನ ಕಂದಾಯ ವ್ಯವಸ್ಥೆ ಭೂದಾಖಲೆಗಳ ಇಲಾಖೆಯಲ್ಲಿನ “ಭೂಮಾಪಕರ ಹುದ್ದೆಗಳ” ಉಳಿಕೆ ಮೂಲ ವೃಂದದ 296 ಮತ್ತು ಹೈದ್ರಾಬಾದ್ ಸ್ಥಳೀಯ ವೃಂದದ 90 ಹುದ್ದೆಗಳ ನೇಮಕಾತಿಗೆ 2024ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಆದರೆ ಇದೀಗ ಸರ್ಕಾರದ ಸುತ್ತೋಲೆಯನ್ವಯ ದಿನಾಂಕ 25 ನವೆಂಬರ್ 2024ರ ಅಧಿಸೂಚನೆಗಳನ್ನು ಕೂಡಲೇ ಹಿಂಪಡೆಯುವಂತೆ ಸೂಚಿಸಿದ್ದು, ಸದರಿ ಸೂಚನೆಗಳು 28 ಅಕ್ಟೋಬರ್ 2024 ರಿಂದ ಅನ್ವಯವಾಗುವುದಾಗಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಸದರಿ ನೇಮಕಾತಿ ಕುರಿತಾದ ಕಾರ್ಯಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು ಸೂಕ್ತ” ಎಂದು ನಿರ್ಣಯಿಸಲಾಗಿರುತ್ತದೆ, ಈ ಕುರಿತು ಅಧಿಕೃತ ಪ್ರಕಟಣೆಯನ್ನು ಕೆಪಿಎಸ್‌ಸಿ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kpsc.kar.nic.in ಭೇಟಿನೀಡಿರಿ. |
ಕೆಪಿಎಸ್ಸಿ ನೇಮಕಾತಿ 384 ಕೆಎಎಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ ರದ್ದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿಗೆ ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಿ ಡಿಸೆಂಬರ್ 2024ರಲ್ಲಿ ಪೂರ್ವಭಾವಿ ಪರೀಕ್ಷೆಯನ್ನು ನಡೆಸಿ ಅರ್ಹ ಅಭ್ಯರ್ಥಿಗಳಿಗೆ ಮೇ 2025ರಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗಿತ್ತು ಆದರೆ ಇದೀಗ ಸರಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಳ ಮಾಡಿದ ರಾಜ್ಯ ಸರಕಾರದ ಆದೇಶದ ಆಧಾರದ ಮೇಲೆ 384 ಗೆಜೆಟೆಡ್ ಪ್ರೊಬೇಷನರ್ ನೇಮಕ ಅಧಿಸೂಚನೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ರದ್ದುಪಡಿಸಿದೆ, ಸರಕಾರ ಈಗ ನೇಮಕ ಪ್ರಕ್ರಿಯೆ ಊರ್ಜಿತಗೊಳಿಸಬೇಕಾದರೆ ಕೆಎಟಿ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kpsc.kar.nic.in ಭೇಟಿನೀಡಿರಿ. |
ಕನಾ೯ಟಕ ಲೋಕಸೇವಾ ಆಯೋಗ ಕೆಪಿಎಸ್‌ಸಿ 2025ರ ನೇಮಕಾತಿ ಪರೀಕ್ಷೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 2024ರಲ್ಲಿ ಗ್ರೂಪ್-ಎ, ಗ್ರೂಪ್-ಬಿ ಮತ್ತು ಗ್ರೂಪ್-ಸಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಈ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.kpsc.kar.nic.in ಪ್ರವೇಶಿಸಿ ಅಥವಾ ಕೆಳಗಿನ ಲಿಂಕ್ ಕ್ಲಿಕ್ಕಿಸಿ ಪರೀಕ್ಷಾ ದಿನಾಂಕ, ಸಮಯ, ಹುದ್ದೆಯ ಹೆಸರು ಮತ್ತು ನೇಮಕಾತಿ ಇಲಾಖೆ ಇತರ ಮಾಹಿತಿಯನ್ನು ನೋಡಬಹುದಾಗಿದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.kpsc.kar.nic.in ಭೇಟಿನೀಡಿರಿ. |
ಕೆಇಎ ನೇಮಕಾತಿ 2025ರಲ್ಲಿ ರಾಜ್ಯ ಸರ್ಕಾರದ ನೇಮಕಾತಿಗಳು ಕರ್ನಾಟಕ ರಾಜ್ಯ ಸರ್ಕಾರ 2025ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ರದ ಮೂಲಕ ನಡೆಸಲಾಗುವ ನೇಮಕಾತಿ ವಿವರವನ್ನು ಪ್ರಕಟಿಸಿದೆ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಬಿಇ, ಬಿಟೆಕ್ ಎಂಬಿಎ ಸೇರಿದಂತೆ ಇತರೆ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಮುಂಬರಲಿರುವ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ, 747 ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಸರ್ಕಾರದ ಅನುಮತಿ ಪಡೆಯುತ್ತಿದ್ದಂತೆ ಅರ್ಜಿ ಆಹ್ವಾನಿಸಲಾಗುತ್ತದೆ, ಹುದ್ದೆಯ ಹೆಸರು, ಇಲಾಖೆ, ಹುದ್ದೆಗಳ ಸಂಖ್ಯೆ ಇತರ ವಿವರವನ್ನು ಪ್ರಕಟಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea ಪ್ರವೇಶಿಸಿ ಅಥವಾ ಕೆಳಗಿನ ಲಿಂಕ್ ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದಾಗಿದೆ. |
ಕಂದಾಯ ಇಲಾಖೆ ನೇಮಕಾತಿ 1000 ಗ್ರಾಮ ಆಡಳಿತ ಅಧಿಕಾರಿ ಅಂತಿಮ ಅಂಕ ಪಟ್ಟಿ ಪ್ರಕಟ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಏಪ್ರಿಲ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು 27 ಅಕ್ಟೋಬರ್ 2024ರಂದು ನಡೆಸಲಾಗಿತ್ತು ಇದೀಗ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 35% ರಷ್ಟು ಅಂಕಗಳಿಸಿ ಅರ್ಹರಾದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಪ್ರಕಟಿಸಲಾಗಿದೆ, ಅಂತಿಮ ಅಂಕಪಟ್ಟಿಯಲ್ಲಿ ಗಳಿಸಿದ ಅಂಕಗಳು ಮತ್ತು ಮೀಸಲಾತಿ ನಿಯಮಾನುಸಾರ ಖಾಲಿ ಇರುವ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea ಭೇಟಿನೀಡಿರಿ. |
ಕಂದಾಯ ಇಲಾಖೆ ನೇಮಕಾತಿ 1000 ಗ್ರಾಮ ಆಡಳಿತ ಅಧಿಕಾರಿ ತಾತ್ಕಾಲಿಕ ಅಂಕ ಪಟ್ಟಿ ಪ್ರಕಟ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಏಪ್ರಿಲ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು 27 ಅಕ್ಟೋಬರ್ 2024ರಂದು ನಡೆಸಲಾಗಿತ್ತು ಇದೀಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದೆ, ಆಕ್ಷೇಪಣೆಗಳು ಇದ್ದರೆ 28 ನವೆಂಬರ್ 2024ರ ಒಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ https://cetonline.karnataka.gov.in/kea ಅರ್ಜಿ ಸಂಖ್ಯೆ ನಮೂದಿಸಿ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ವಿವರವನ್ನು ನೋಡಬಹುದಾಗಿದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea ಭೇಟಿನೀಡಿರಿ. |
ಕರ್ನಾಟಕ ಅಂಚೆ ವೃತ್ತ 1940 ಜಿಡಿಎಸ್ ಹುದ್ದೆಗಳ ಫಲಿತಾಂಶ ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತದಲ್ಲಿ ಖಾಲಿ ಇರುವ 1940 ಗ್ರಾಮೀಣ್ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳನ್ನು ಭರ್ತಿ ಮಾಡಲು ಜುಲೈ 2024ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಿದೆ, ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ https://indiapostgdsonline.gov.in ಪ್ರವೇಶಿಸಿ ಅಥವಾ ಕೆಳಗಿನ ಲಿಂಕ್ ಕ್ಲಿಕ್ಕಿಸಿ ದಾಖಲೆ ಪರಿಶೀಲನೆಗೆ ಅರ್ಹತಾ ಪಟ್ಟಿ, ಅಭ್ಯರ್ಥಿಗಳ ಹೆಸರು, ಹುದ್ದೆಯ ಹೆಸರು ಇತರ ವಿವರ ನೋಡಬಹುದಾಗಿದೆ. |
.
.
.