.

.

.

ಉದ್ಯೋಗ ಸುದ್ದಿಗಳು

‎ ‎‎ ‎‎ ‎ ‎‎ ‎‎ ‎‎‎ ‎‎ ‎‎‎ ‎‎ ‎‎‎

ಕರ್ನಾಟಕದಲ್ಲಿ ನಡೆಯುವ ಇನ್ನೂ ಹೆಚ್ಚಿನ ಉದ್ಯೋಗ ಸುದ್ದಿಗಳಿಗಾಗಿ, ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿರಿ: www.karemp.com .

‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎

‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ 

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಬ್ಯಾಂಕ್ ಆಫ್ ಬರೋಡಾ ನೇಮಕಾತಿ

ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ 440 ಅಪ್ರೆಂಟಿಸ್ ನೇಮಕಾತಿ

ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ 440 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಸೇರಿದಂತೆ ದೇಶಾದ್ಯಂತ ಒಟ್ಟು 2700 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಯಾವುದೇ ಪದವಿ ಪಡೆದಿರಬೇಕು, ಸಾಮಾನ್ಯ ವರ್ಗ 20 ರಿಂದ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ(ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು), ಆನ್‌ಲೈನ್ ಪರೀಕ್ಷೆ, ದಾಖಲೆ ಪರಿಶೀಲನೆ, ರಾಜ್ಯದ ಸ್ಥಳೀಯ ಭಾಷೆಯ ಪರೀಕ್ಷೆ ನಡೆಸಿ ನೇಮಕಾತಿ ಮಾಡಲಾಗುವುದು, ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ www.bankofbaroda.in ಪ್ರವೇಶಿಸಿ ದಿನಾಂಕ 01 ಡಿಸೆಂಬರ್ 2025ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಬೇಟಿನೀಡಿರಿ. (ಸೂಚನೆ:- ಈ ನೇಮಕಾತಿಯು ಖಾಯಂ ನೇಮಕಾತಿಯಾಗಿರುವುದಿಲ್ಲ ಅಪ್ರೆಂಟಿಸ್ ನೇಮಕಾತಿಯು ತರಬೇತಿಯಾಗಿದ್ದು ತರಬೇತಿ ಮುಗಿಯುವವರೆಗೆ ₹ 15000 ಪ್ರತಿ ತಿಂಗಳು ಸಂಭಾವನೆ ನೀಡಲಾಗುವುದು).

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಜಿಲ್ಲಾ ಆಸ್ಪತ್ರೆ ವಿವಿಧ ಹುದ್ದೆಗಳ ನೇಮಕಾತಿ

ಶುಶ್ರೂಷಾಧಿಕಾರಿ, ತಂತ್ರಜ್ಞ , ಫಾರ್ಮಾಸಿಸ್ಟ್ ಹುದ್ದೆಗಳ ನೇಮಕಾತಿ

ಕೊಪ್ಪಳ ಜಿಲ್ಲೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕುಷ್ಟಗಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, 1) ಶುಶ್ರೂಷಾಧಿಕಾರಿ ಹುದ್ದೆಗಳು, 12 ಹುದ್ದೆಗಳು, ವಿದ್ಯಾರ್ಹತೆ: ಬಿ.ಎಸ್ಸಿ ನರ್ಸಿಂಗ್/ಜಿ.ಎನ್.ಎಂ ನರ್ಸಿಂಗ್ ವಿದ್ಯಾರ್ಹತೆ ಹೊಂದಿರಬೇಕು, ಕರ್ನಾಟಕ ನರ್ಸಿಂಗ್ ಕೌನ್ಸಿಲ್ಸ್ ನೊಂದಣಿಯಾಗಿರಬೇಕು. 02) ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು ಹುದ್ದೆಗಳು, 01 ಹುದ್ದೆಗಳು, ವಿದ್ಯಾರ್ಹತೆ: ಪ್ರಯೋಗ ಶಾಲಾ ತಂತ್ರಜ್ಞ ವಿದ್ಯಾರ್ಹತೆ ಹೊಂದಿರಬೇಕು. 03) ಫಾರ್ಮಾಸಿಸ್ಟ್ 01 ಹುದ್ದೆ, ಔಷಧ ವಿತರಕರು ಹುದ್ದೆಗೆ ಅಗತ್ಯ ವಿದ್ಯಾರ್ಹತೆ ಹೊಂದಿದ ಮತ್ತು ರಾಜ್ಯದ ಫಾರ್ಮಸಿ ಕೌನ್ಸಿಲ್ ನಲ್ಲಿ ನೋಂದಣಿಯಾಗಿರಬೇಕು. ಎಲ್ಲಾ ಹುದ್ದೆಗಳಿಗೆ ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ದಿನಾಂಕ 15 ನವೆಂಬರ್ 2025ರ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://koppal.nic.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ

ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಮೇಲೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ, ಮುಖ್ಯ ಭದ್ರತಾ ಮುಖ್ಯಸ್ಥ ಹುದ್ದೆ, ಸಹಾಯಕ ಟರ್ಮಿನಲ್ ವ್ಯವಸ್ಥಾಪಕರು ಹುದ್ದೆ, ಸಹಾಯಕ ಏರ್ ಸೈಡ್ ಕಾರ್ಯಾಚರಣೆ ವ್ಯವಸ್ಥಾಪಕರು ಹುದ್ದೆ, ಭದ್ರತಾ ಇಲಾಖೆ ಸಹಾಯಕ ವ್ಯವಸ್ಥಾಪಕರು ಹುದ್ದೆ, ವಿಮಾನ ನಿಲ್ದಾಣ ವ್ಯವಸ್ಥೆ ಮತ್ತು ಐಟಿ ನೆಟ್ವರ್ಕ್ ಸಲಹೆಗಾರ ಹುದ್ದೆ, ಸಿವಿಲ್ ಎಂಜಿನಿಯರ್‌ಗಳ ಹುದ್ದೆ, ಎಲೆಕ್ಟ್ರಿಕಲ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ಮತ್ತು ಅನುಭವ ಹೊಂದಿರಬೇಕು, ಆಸಕ್ತ ಅರ್ಹ ಅಭ್ಯರ್ಥಿಗಳು ರೆಸ್ಯೂಮೆ ಮತ್ತು ಅಗತ್ಯ ದಾಖಲೆಗಳನ್ನು ದಿನಾಂಕ 17 ನವೆಂಬರ್ 2025ರ ಒಳಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://ksiidc.karnataka.gov.in ಬೇಟಿ ನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ರೈಲ್ವೆ ಗಾಲಿ ಕಾರ್ಖಾನೆ ಬೆಂಗಳೂರು ನೇಮಕಾತಿ

ಕ್ರೀಡಾ ಕೋಟಾದಡಿ 15 ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೆ ಗಾಲಿ ಕಾರ್ಖಾನೆ ಬೆಂಗಳೂರು ಕ್ರೀಡಾ ಕೋಟಾದಡಿ 15 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಹತ್ತನೇ ತರಗತಿ ಅಥವಾ ಪಿಯುಸಿ ಪಾಸಾಗಿರಬೇಕು ಮತ್ತು ಕ್ರೀಡಾ ಸಾಧನೆ ಮಾಡಿರಬೇಕು, ವಯೋಮಿತಿ 18 ರಿಂದ 25 ವರ್ಷ ನಿಗದಿಪಡಿಸಲಾಗಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ಅರ್ಜಿ ಪಾರ್ಮ್ ಪಡೆದು ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://rwf.indianrailways.gov.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಗ್ರಾಮ ಒನ್ ತೆರೆಯಲು ಅರ್ಜಿ ಆಹ್ವಾನ

ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ

ಗ್ರಾಮ ಒನ್ ಕರ್ನಾಟಕ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಎಲ್ಲಾ ಇಲಾಖೆಗಳ ನಾಗರಿಕ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಸ್ವಂತ ಗ್ರಾಮದಲ್ಲಿ ತಲುಪಿಸುವ ಗುರಿಯನ್ನು ಹೊಂದಿರುವ ಯೋಜನೆಯಾಗಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ, ಪ್ರಸ್ತುತ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕಲಬುರಗಿ, ಕೊಡಗು, ಮಂಡ್ಯ, ಉಡುಪಿ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಡಿಪ್ಲೊಮಾ/ಐಟಿಐ/ಪಿಯುಸಿ II/ಪದವೀಧರರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಕನ್ನಡ, ಇಂಗ್ಲಿಷ್ ಎರಡರಲ್ಲೂ ಟೈಪಿಂಗ್ ಮಾಡಲು ಪರಿಣತಿ ಹೊಂದಿರಬೇಕು. ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ದಿನಾಂಕ 15 ನವೆಂಬರ್ 2025ರ ಒಳಗೆ ಅರ್ಜಿ ಸಲ್ಲಿಸಬೇಕು, ಜಿಲ್ಲೆಯ ಯಾವ ಭಾಗದಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಯಲು ವೆಬ್‌ಸೈಟ್ https://kal-mys.gramaone.karnataka.gov.in ಭೇಟಿನೀಡಿ ಜಿಲ್ಲೆ-ತಾಲೂಕು-ಗ್ರಾಮ ಆಯ್ಕೆ ಮಾಡಿ ಮಾಹಿತಿ ತಿಳಿಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kal-mys.gramaone.karnataka.gov.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ

ಅಂಗ ಕಸಿ ಸಂಯೋಜಕರು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಲ್ಲಿ ಖಾಲಿ ಇರುವ 07 ಅಂಗ ಕಸಿ ಸಂಯೋಜಕರು ಹುದ್ದೆಗಳನ್ನು ಗುತ್ತಿಗೆ ಆಧಾರದಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಅಂಗೀಕೃತ ವೈದ್ಯಕೀಯ ಪದ್ಧತಿಯಲ್ಲಿ ಪದವಿ ಅಥವಾ ನರ್ಸಿಂಗ್ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಸಮಾಜ ಕಾರ್ಯ, ಅಥವಾ ಮನೋವೈದ್ಯಕೀಯ ಶಾಸ್ತ್ರ, ಅಥವಾ ಸಮಾಜ ಶಾಸ್ತ್ರ, ಅಥವಾ ಸಮಾಜ ವಿಜ್ಞಾನ, ಅಥವಾ ಸಾರ್ವಜನಿಕ ಆರೋಗ್ಯ ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು, ಕನಿಷ್ಠ 2 ವರ್ಷಗಳ ಕಾಲ ಅಂಗಾಂಗಕ್ಕೆ ಸಂಬಂಧಿಸಿದಂತೆ ಅನುಭವ ಹೊಂದಿರಬೇಕು ಹಾಗೂ ಅಂಗಾಂಗ ಕಸಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಅವಶ್ಯಕ ಜ್ಞಾನವನ್ನು ಹೊಂದಿರಬೇಕು, ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುವುದು, ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://jeevasarthakathe.karnataka.gov.in ಪ್ರವೇಶಿಸಿ ಅರ್ಜಿ ಪಾರ್ಮ್ ಪಡೆದು ದಿನಾಂಕ 01 ನವೆಂಬರ್ 2025 ರಿಂದ 11 ನವೆಂಬರ್ 2025 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://jeevasarthakathe.karnataka.gov.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ರೈಲ್ವೆ ನೇಮಕಾತಿ ಮಂಡಳಿ

2570 ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ

ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ 2570 ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುವುದರ ಕುರಿತು ಪತ್ರಿಕಾ ಪ್ರಕಟಣೆ ಪ್ರಕಟಿಸಿದೆ, ಬೆಂಗಳೂರು ರೈಲ್ವೆ ಸೇರಿದಂತೆ ದೇಶಾದ್ಯಂತ ವಿವಿಧ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ 2570 ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು 31 ಅಕ್ಟೋಬರ್ 2025ರಂದು ಪ್ರಕಟಿಸಲಾಗುತ್ತದೆ, ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಿ.ಇ/ ಬಿ.ಟೆಕ್, ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು, ನೇಮಕಾತಿ ಅಧಿಸೂಚನೆಯನ್ನು ಶೀಘ್ರದಲ್ಲಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.rrbbnc.gov.in ಭೇಟಿನೀಡಿರಿ ಅಥವಾ ನಮ್ಮ ಆಪ್ ಸಂಪರ್ಕದಲ್ಲಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕರ್ನಾಟಕ ರಾಜ್ಯ ಸರ್ಕಾರಿ ನೇಮಕಾತಿ

ನೇಮಕಾತಿ ಆದೇಶ ಹೊರಡಿಸುವಂತಿಲ್ಲ

ಕರ್ನಾಟಕ ರಾಜ್ಯ ಸರ್ಕಾರಿ ನೇಮಕಾತಿಯಲ್ಲಿ ಸರ್ಕಾರವು ಪರಿಶಿಷ್ಟ ಜಾತಿಗಳನ್ನು ಗ್ರೂಪ್-ಎ, ಗ್ರೂಪ್-ಬಿ ಮತ್ತು ಗ್ರೂಪ್-ಸಿ ಜಾತಿಗಳೆಂದು ಮೂರು ಗುಂಪುಗಳಾಗಿ ವಿಂಗಡಿಸಿ ಅಲೆಮಾರಿ ಸಮುದಾಯಗಳನ್ನು ಗ್ರೂಪ್-ಸಿ ಗುಂಪಿಗೆ ಸೇರಿಸಲಾಗಿತ್ತು ಇದೀಗ ಅಲೆಮಾರಿ ಸಮುದಾಯಗಳನ್ನು ಗ್ರೂಪ್-ಸಿ ಗುಂಪಿಗೆ ಸೇರಿಸಿ ಮೀಸಲಾತಿ ಪಾಲು ದಕ್ಕದಂತೆ ಮಾಡಲಾಗಿದೆ ಎಂದು ಹೈಕೋರ್ಟ್‌ ಮೊರೆ ಹೋಗಿವೆ, ಪ್ರಕರಣ ವಾದ ಆಲಿಸಿದ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿ ನೇಮಕಾತಿ ಆದೇಶ ಮಾಡದಂತೆ ಮಧ್ಯಂತರ ಆದೇಶ ಹೊರಡಿಸಿದೆ. ನೇಮಕಾತಿ ‌ಪ್ರಕ್ರಿಯೆ ಮಾಡಬಹುದಾದರೂ ನೇಮಕಾತಿ ಆದೇಶ ಹೊರಡಿಸುವಂತಿಲ್ಲ (ವಿವಿಧ ಹುದ್ದೆಗಳಿಗೆ ನಡೆಯುವ ನೇಮಕಾತಿ ಪ್ರಕ್ರಿಯೆ ಮುಂದುವರೆಸಬಹುದು ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.) ಎಂದು ಹೇಳಿರುವ ನ್ಯಾಯಾಲಯವು ಸರ್ಕಾರಕ್ಕೆ ತಕರಾರು ಸಲ್ಲಿಸಲು ಕಾಲಾವಕಾಶ ಕಲ್ಪಿಸಿ ವಿಚಾರಣೆಯನ್ನು ದಿನಾಂಕ 13 ನವೆಂಬರ್ 2025ಕ್ಕೆ ಮುಂದೂಡಿದೆ. ಒಟ್ಟಾರೆಯಾಗಿ ಒಳಮೀಸಲಾತಿ ಜಾರಿಯು ಗೊಂದಲದ ಗೂಡಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ http://karnatakajudiciary.kar.nic.in ವೆಬ್‌ಸೈಟ್ ಭೇಟಿನೀಡಿರಿ.

‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ರೈಲ್ವೆ ನೇಮಕಾತಿ ಮಂಡಳಿ

8,850 ಎನ್‌ಪಿಟಿಸಿ ಹುದ್ದೆಗಳ ನೇಮಕಾತಿ

ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (ಎನ್‌ಪಿಟಿಸಿ) 8,850 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುವುದರ ಕುರಿತು ಪತ್ರಿಕಾ ಪ್ರಕಟಣೆ ಪ್ರಕಟಿಸಿದೆ, ಬೆಂಗಳೂರು ರೈಲ್ವೆ ಸೇರಿದಂತೆ ದೇಶಾದ್ಯಂತ ವಿವಿಧ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಪದವಿ ವಿದ್ಯಾರ್ಹತೆ ಹಂತದ ಹುದ್ದೆಗಳಾದ ಸ್ಟೇಷನ್ ಮಾಸ್ಟರ್ 615 ಹುದ್ದೆಗಳು, ಗೂಡ್ಸ್ ರೈಲು ವ್ಯವಸ್ಥಾಪಕ 3423 ಹುದ್ದೆಗಳು, ಸಂಚಾರ ಸಹಾಯಕ (ಮೆಟ್ರೋ ರೈಲ್ವೆ) 59 ಹುದ್ದೆಗಳು, ಚೀಪ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್ 161 ಹುದ್ದೆಗಳು, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ 921 ಹುದ್ದೆಗಳು, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ 638 ಹುದ್ದೆಗಳು. ಪದವಿಪೂರ್ವ ವಿದ್ಯಾರ್ಹತೆ ಹಂತದ ಹುದ್ದೆಗಳಾದ ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ 163 ಹುದ್ದೆಗಳು, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ 394 ಹುದ್ದೆಗಳು, ಟ್ರೇನ್ ಕ್ಲರ್ಕ್ 77 ಹುದ್ದೆಗಳು, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ 2,424 ಹುದ್ದೆಗಳು ಸೇರಿದಂಟೆ ಒಟ್ಟು 8,850 ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು 21 ಅಕ್ಟೋಬರ್ 2025ರಂದು ಪ್ರಕಟಿಸಲಾಗುತ್ತದೆ, ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಪದವಿ ಅಥವಾ ದ್ವಿತೀಯ ಪಿಯುಸಿ/12th ಪಾಸಾಗಿರಬೇಕು, ನೇಮಕಾತಿ ಅಧಿಸೂಚನೆಯನ್ನು ಶೀಘ್ರದಲ್ಲಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.rrbbnc.gov.in ಭೇಟಿನೀಡಿರಿ ಅಥವಾ ನಮ್ಮ ಆಪ್ ಸಂಪರ್ಕದಲ್ಲಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ

ಡಿಜಿಟಲ್ ಫಾರೆನ್ಸಿಕ್ ಅನಾಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 05 ಡಿಜಿಟಲ್ ಫಾರೆನ್ಸಿಕ್ ಅನಾಲಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದಮೇಲೆ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಮಾಹಿತಿ ತಂತ್ರಜ್ಞಾನ/ ಕಂಪ್ಯೂಟರ್ ವಿಜ್ಞಾನ/ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ/ ದೂರಸಂಪರ್ಕ ವಿಷಯದಲ್ಲಿ ಬಿ.ಇ/ಬಿ.ಟೆಕ್/ಬಿ.ಸಿ.ಎ/ಎಂ.ಎಸ್ಸಿ/ಎಂ.ಸಿ.ಎ ಮತ್ತು ಯಾವುದೇ ಸಮಾನ ಅಥವಾ ಸಂಬಂಧಿತ ಪದವಿ ಹೊಂದಿರಬೇಕು, 25 ರಿಂದ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://ksp.karnataka.gov.in ಪ್ರವೇಶಿಸಿ ಅರ್ಜಿ ಪಾರ್ಮ ಪಡೆದು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 29 ಅಕ್ಟೋಬರ್ 2025ರ ಒಳಗೆ ಇಲಾಖೆಯ ಇಮೇಲ್ ಗೆ ಅಥವಾ ಅಂಚೆ ಮೂಲಕ ಸಲ್ಲಿಸಬೇಕು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://ksp.karnataka.gov.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಎಸ್‌ಎಸ್‌ಸಿ ನೇಮಕಾತಿ

39481 ಹುದ್ದೆಗಳ ಕಾನ್ಸ್‌ಟೇಬಲ್ ಪರೀಕ್ಷೆ ಫಲಿತಾಂಶ ಪ್ರಕಟ

ಸಿಬ್ಬಂದಿ ನೇಮಕಾತಿ ಸಂಸ್ಥೆಯು(ಎಸ್‌ಎಸ್‌ಸಿ) ಕರ್ನಾಟಕ ಸೇರಿದಂತೆ ದೇಶಾದ್ಯಂತ ಖಾಲಿ ಇರುವ 39481 ಕಾನ್ಸ್‌ಟೇಬಲ್‌ ಹುದ್ದೆಗಳನ್ನು ಭರ್ತಿ ಮಾಡಲು ಸೆಪ್ಟೆಂಬರ್ 2024ರಲ್ಲಿ ಅರ್ಜಿ ಆಹ್ಚಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಆಗಸ್ಟ್/ಸೆಪ್ಟೆಂಬರ್ 2025 ರಲ್ಲಿ ದೈಹಿಕ ಪರೀಕ್ಷೆಯನ್ನು ನಡೆಸಲಾಗಿತ್ತು ಇದೀಗ ನೇಮಕಾತಿಯ ಮುಂದಿನ ಹಂತವಾದ ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಅರ್ಹರಾದ 1,26,736 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಮಾಡಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ https://ssc.gov.in ಪ್ರವೇಶಿಸಿ ಆಯ್ಕೆಪಟ್ಟಿಯನ್ನು ನೋಡಬಹುದಾಗಿದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ https://ssc.gov.in ಬೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕರ್ನಾಟಕ ಅರಣ್ಯ ಇಲಾಖೆ

540 ಫಾರೆಸ್ಟ್ ಗಾರ್ಡ್ ಹುದ್ದೆಗಳ ಆಯ್ಕೆಪಟ್ಟಿ ಪ್ರಕಟ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ಗಸ್ತು ಅರಣ್ಯ ಪಾಲಕ ಹುದ್ದೆಗಳ(Beat Foresters /Forest Guards) ನೇಮಕಾತಿಗೆ ಡಿಸೆಂಬರ್ 2023ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಮತ್ತು ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆ ನಡೆಸಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಜುಲೈ 2025ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿತ್ತು ಇದೀಗ 1:1 ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಇಲಾಖೆಯು ಬಿಡುಗಡೆಗೊಳಿಸಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ಅಥವಾ ಕೆಳಗಿನ ಲಿಂಕ್ ಕ್ಲಿಕ್ಕಿಸಿ ಆಯ್ಕೆ ಪಟ್ಟಿಯನ್ನು ನೋಡಬಹುದಾಗಿದೆ, ಹೆಚ್ಚಿನ ಮಾಹಿತಿಗೆ ಅರಣ್ಯ ಇಲಾಖೆ ಅಧಿಕೃತ ವೆಬ್-ಸೈಟ್ https://aranya.gov.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನ

ಬಿ.ಇಡಿ. ಸರ್ಕಾರಿ ಕೋಟಾ ಸೀಟುಗಳ ಪ್ರವೇಶಾತಿ

ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯ 2025-26ನೇ ಸಾಲಿನ ಎರಡು ವರ್ಷಗಳ ಬಿ.ಇಡಿ. ಕೋರ್ಸ್‌ಗೆ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶ ಮತ್ತು ಹಂಚಿಕೆ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 03, 2025 ರಿಂದ ನವೆಂಬರ್ 03, 2025 ರವರೆಗೆ ಇಲಾಖಾ ವೆಬ್‌ಸೈಟ್‌ www.schooleducation.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಶುಲ್ಕವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ₹100 ಮತ್ತು ಇತರೆ ವರ್ಗಗಳಿಗೆ ₹300. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.schooleducation.karnataka.gov.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕರ್ನಾಟಕ ಸರ್ಕಾರಿ ನೇಮಕಾತಿಗಳಲ್ಲಿ ವಯೋಮಿತಿ ಸಡಿಲಿಕೆ

ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರವು ಒಂದು ಪ್ರಮುಖ ಆದೇಶ ಹೊರಡಿಸಿದೆ. ನೇರ ನೇಮಕಾತಿಗಾಗಿ ನಿಗದಿಪಡಿಸಿದ್ದ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಯ ಕ್ರಮವಾಗಿ 3 ವರ್ಷಗಳ ಕಾಲ ಸಡಿಲಗೊಳಿಸಿದೆ. ಈ ಆದೇಶವು 2027ರ ಡಿಸೆಂಬರ್ 31ರವರೆಗೆ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸುವ ಎಲ್ಲಾ ಹುದ್ದೆಗಳಿಗೂ ಅನ್ವಯವಾಗಲಿದೆ. ಸರ್ಕಾರಿ ಉದ್ಯೋಗವನ್ನು ಬಯಸುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದ್ದು, ಅವರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸರ್ಕಾರವು ಮನವಿ ಮಾಡಿದೆ. ಈ ಹಿಂದೆ 2 ವರ್ಷ ವಯೋಮಿತಿಯನ್ನು ಸರ್ಕಾರ ಸಡಿಲಿಕೆ ನೀಡಲಾಗಿತ್ತು ಆದರೆ ಅಭ್ಯರ್ಥಿಗಳು ಹೆಚ್ಚಿನ ಸಡಿಲಿಕೆ ಬೇಡಿಕೆ ನೀಡಿದ್ದರಿಂದ ಪ್ರಸ್ತುತ ಒಂದು ಬಾರಿಗೇ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಿ ಆದೇಶಿಸಲಾಗಿರುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಸೇವಾ ನಿಯಮಗಳು) ಇಲಾಖೆ ಆದೇಶ ಹೊರಡಿಸಿದೆ.

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕೆಪಿಸಿಎಲ್ ನೇಮಕಾತಿ

ನೇಮಕಾತಿ ಮರು ಪರೀಕ್ಷೆಗೆ ಆದೇಶ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಸಿಎಲ್) ದಲ್ಲಿ ಖಾಲಿ ಇದ್ದ ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಆಗಸ್ಟ್ 2017ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು 2024ರ ಫೆಬ್ರುವರಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿ ಆಯ್ಕೆಪಟ್ಟಿಯನ್ನು ಬಿಡುಗಡೆಮಾಡಲಾಗಿತ್ತು, ನೇಮಕಾತಿ ಅಧಿಸೂಚನೆಯಲ್ಲಿ ಇಲ್ಲದಿದ್ದರೂ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವೇಳೆಯಲ್ಲಿ ಋಣಾತ್ಮಕ ಅಂಕ ಪದ್ಧತಿ ಅನುಸರಿಸಿದ್ದನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆಹೋಗಿದ್ದರು ಇದೀಗ 404 ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ ನೇಮಕಾತಿ ಮರು ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್‌ ಆದೇಶಿಸಿದೆ, ನಾಲ್ಕು ತಿಂಗಳ ಒಳಗೆ ಹೊಸದಾಗಿ ಪರೀಕ್ಷೆ ನಡೆಸುವಂತೆ ರಾಜ್ಯ ಸರಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kpcl.karnataka.gov.in ಭೇಟಿನೀಡಿರಿ.

‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ರೈಲ್ವೆ ನೇಮಕಾತಿ

ರೈಲ್ವೆ 32438 ಗ್ರೂಪ್ ‘ಡಿ’ ಅರ್ಜಿ ಸ್ಥಿತಿ ಲಿಂಕ್ ಪ್ರಕಟ

ಭಾರತೀಯ ರೈಲ್ವೆ ಮಂಡಳಿ, ಬೆಂಗಳೂರು ರೈಲ್ವೆ ಸೇರಿದಂತೆ ದೇಶಾದ್ಯಂತ ಒಟ್ಟು 32438 ಗ್ರೂಪ್ ‘ಡಿ’ ಹುದ್ದೆಗಳ ನೇಮಕಾತಿಗೆ ಜನವರಿ 2025 ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಲು ರೈಲ್ವೆ ಮಂಡಳಿ ಲಿಂಕ್ ಬಿಡುಗಡೆಮಾಡಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.rrbapply.gov.in ಪ್ರವೇಶಿಸಿ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಅಥವಾ ಇಮೇಲ್ ಮತ್ತು ಪಾಸ್‌ವರ್ಡ್ ನಮೂದಿಸಿ ಅರ್ಜಿ ಸ್ವೀಕೃತವಾಗಿರುವುದರ ಕುರಿತು ಖಾತರಿಪಡಿಸಿಕೊಳ್ಳಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನವೆಂಬರ್/ಡಿಸೆಂಬರ್ 2025ರಲ್ಲಿ ನಡೆಸಲು ರೈಲ್ವೆ ಮಂಡಳಿ ಸಿದ್ದತೆ ನಡೆಸಿದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://rrbbnc.gov.in ಅಥವಾ ನಮ್ಮ ವೆಬ್‌ಸೈಟ್ www,karemp.com ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕೆಪಿಎಸ್‌ಸಿ ನೇಮಕಾತಿ

586 ಸಹಾಯಕ ಕೃಷಿ, 86 ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ ರದ್ದು

ಕರ್ನಾಟಕ ಲೋಕ ಸೇವಾ ಆಯೋಗ 586 ಸಹಾಯಕ ಕೃಷಿ ಅಧಿಕಾರಿಗಳು ಹುದ್ದೆಗಳು ಹಾಗೂ 86 ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಕ್ಟೋಬರ್ 2024ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಮತ್ತು ಈ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ದಿನಾ೦ಕ 27/28 ಸೆಪ್ಟೆಂಬರ್ 2025 ಮತ್ತು 05 ಅಕ್ಟೋಬರ್ 2025ರಂದು ನಡೆಸಲು ನಿಗದಿಪಡಿಸಲಾಗಿತ್ತು ಆದರೆ ಇದೀಗ ದಿನಾ೦ಕ: 28 ಅಕ್ಟೋಬರ್ 2024ರ ನ೦ತರ ಸರ್ಕಾರದ ಯಾವುದೇ ಇಲಾಖೆ/ನಿಗಮ/ಮಂ೦ಡಳಿ/ಸ್ಟಾಯತ್ತ ಸಂಸ್ಥೆಗಳ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಸ೦ಬ೦ಧಿಸಿದ ನೇಮಕಾತಿ ಪ್ರಾಧಿಕಾರಗಳು ಯಾವುದಾದರೂ ತಿದ್ದುಪಡಿ ಅಧಿಸೂಚನೆಗಳನ್ನು ಹೊರಡಿಸಿದ್ದಲ್ಲಿ ಅ೦ತಹ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು . ಸಹ ರದ್ದುಗೊಳಿಸಿ, ಪರಿಶಿಷ್ಟಜಾತಿ ಒಳೆ ಮೀಸಲಾತಿಯನ್ನು ಅಳವಡಿಸಿಕೊಂಡು ಹೊಸದಾಗಿ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸಬೇಕೆ೦ದು ಸೂಚಿಸಲಾಗಿರುವುದರಿಂದ ಆಯೋಗವು 27-09-2025ರಂದು ನಿಗದಿಪಡಿಸಲಾಗಿದ್ದ ಕನ್ನಡ ಭಾಷಾ ಪರೀಕ್ಷೆ ಮತ್ತು ದಿನಾ೦ಕ 28 ಸೆಪ್ಟೆಂಬರ್ 2025 ಹಾಗೂ 05 ಅಕ್ಟೋಬರ್ 2025ರಂದು ನಿಗದಿಪಡಿಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರದ್ದುಪಡಿಸಲಾದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kpsc.kar.nic.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಆಯ್ಕೆಪಟ್ಟಿ

402 ಸಿವಿಲ್ ಪೊಲೀಸ್ ನೇಮಕಾತಿ ಆಯ್ಕೆಪಟ್ಟಿ ಪ್ರಕಟ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 402 ಸಿವಿಲ್ ಪೊಲೀಸ್ ಸಬ್ ಇನ್ನೆಕ್ಟರ್ ಹುದ್ದೆಗಳ ನೇಮಕಾತಿಗೆ 03 ಮಾರ್ಚ್ 2021 ರಲ್ಲಿ ಅಧಿಸೂಚನೆಯನ್ನು ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಈ ಹಿಂದೆ ನಡೆಸಲಾಗಿತ್ತು ಇದೀಗ ಈ ಹುದ್ದೆಗಳ ನೇಮಕಾತಿ ಅಂತಿಮ ಆಯ್ಕೆಪಟ್ಟಿಯನ್ನು ಇಲಾಖೆಯು ಪ್ರಕಟಗೊಳಿಸಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://arc21.ksp-recruitment.in ಪ್ರವೇಶಿಸಿ ಆಯ್ಕೆಪಟ್ಟಿಯನ್ನು ನೋಡಬಹುದಾಗಿದೆ, (ಆದರೆ ಈ ಪ್ರಕ್ರಿಯೆ ಹೈಕೋರ್ಟ್/ಸರ್ವೋಚ್ಚ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವಾದ-ವಿವಾದಗಳ ಅಂತಿಮ ತೀರ್ಪುಗಳಿಗೆ ಒಳಪಟ್ಟಿರುತ್ತದೆ. ಪ್ರಕಟಿತ ಪಟ್ಟಿಗಳು ಇಲಾಖಾ ನಿಯಮಗಳು, ವರ್ಗ ಬದಲಾವಣೆ ಮತ್ತು ಬೃಂದ ಬದಲಾವಣೆಗಳ ಅನ್ವಯ ತಿದ್ದುಪಡಿಗೆ ಒಳಗಾಗಬಹುದಾಗಿಯೂ ತಿಳಿಸಲಾಗಿದೆ) ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://ksp.karnataka.gov.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ 

ಕರ್ನಾಟಕ ಸರ್ಕಾರ ನೇಮಕಾತಿ ಕುರಿತು ಪ್ರಕಟಣೆ ಪ್ರಕಟಿಸಿದೆ

ಒಳ ಮೀಸಲಾತಿ ಜಾರಿ: ಅಕ್ಟೋಬರ್ 28 ನಂತರದ ನೇಮಕಾತಿ ರದ್ದು

ರಾಜ್ಯ ಸರ್ಕಾರವು ಒಳ ಮೀಸಲಾತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು, 2024 ಅಕ್ಟೋಬರ್ 28 ನಂತರ ಹೊರಬಂದ ಮತ್ತು ನಿಯಮ ಪಾಲಿಸದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ತಕ್ಷಣದಿಂದ ರದ್ದುಗೊಳಿಸಿದೆ. ಡಿಪಿಎಆರ್ ಸುತ್ತೋಲೆಯಲ್ಲಿ, ಕ್ರೀಡಾಪಟುಗಳಿಗೆ 2% ಮೀಸಲಾತಿಯನ್ನೂ ಸೇರಿಸಿ ಹೊಸ ಅಧಿಸೂಚನೆಗಳನ್ನು ಬೇಗ ಹೊರಡಿಸಿ, ಕಾಲಮಿತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅಭ್ಯರ್ಥಿಗಳ ಮನವಿಯ ಹಿನ್ನೆಲೆ, ಕೆಪಿಎಸ್‌ಸಿ ಕೃಷಿ ಇಲಾಖೆಯ 945 ಬಿ ವರ್ಗ ಹುದ್ದೆಗಳ ಪರೀಕ್ಷೆಗಳನ್ನು ಮುಂದೂಡಿದೆ; ಪ್ರವೇಶಪತ್ರಗಳು ಹೊರಬಂದಿದ್ದರೂ ದಿನಾಂಕಗಳನ್ನು ಸ್ಥಗಿತಗೊಳಿಸಲಾಗಿದೆ. ಪರೀಕ್ಷಾರ್ಥಿಗಳು ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಿತ ಸಚಿವರನ್ನು ಭೇಟಿ ಮಾಡಿ ಒಳ ಮೀಸಲಾತಿ ಅನ್ವಯವಾಗುವಂತೆ ಮನವಿ ಸಲ್ಲಿಸಿದ್ದನ್ನು ಸರ್ಕಾರ ಪರಿಗಣಿಸಿದೆ. ಒಳ ಮೀಸಲಾತಿ ಸರಿಯಾಗಿ ಅನ್ವಯಿಸಲಾಗದ ಹಿನ್ನೆಲೆ ಪಾರದರ್ಶಕತೆ ಮತ್ತು ಸಾಮಾಜಿಕ ನ್ಯಾಯ ಖಾತ್ರಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೃಷಿ ಇಲಾಖೆಗೆ ಮಾತ್ರವಲ್ಲ, ಇತರ ಇಲಾಖೆಗಳ ಮೇಲೂ ಪರಿಣಾಮ ಬೀರಲಿದೆ; ಹೊಸ ನಿಯಮಗಳಿಗೆ ಅನುಗುಣವಾಗಿ ವೇಳಾಪಟ್ಟಿಗಳು ಪುನರ್‌ ನಿಗದಿಯಾಗಲಿವೆ. ಶೀಘ್ರದಲ್ಲೇ ಹೊಸ ಅಧಿಸೂಚನೆಗಳು ಪ್ರಕಟವಾಗಲಿವೆ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ರೈಲ್ವೆ ನೇಮಕಾತಿ ಮಂಡಳಿ

368 ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ನೇಮಕಾತಿ

ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ಸೆಕ್ಷನ್ ಕಂಟ್ರೋಲರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುವುದರ ಕುರಿತು ಪತ್ರಿಕಾ ಪ್ರಕಟಣೆ ಪ್ರಕಟಿಸಿದೆ, ಬೆಂಗಳೂರು ರೈಲ್ವೆ ಸೇರಿದಂತೆ ದೇಶಾದ್ಯಂತ ವಿವಿಧ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ 368 ಸೆಕ್ಷನ್ ಕಂಟ್ರೋಲರ್ ಹುದ್ದೆಗಳು, ಅರ್ಜಿ ಸಲ್ಲಿಸಲು ಪದವಿ ಪಡೆದಿರಬೇಕು. ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ 20 ರಿಂದ 33 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ(ಮೀಸಲಾತಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗುವುದು) ನೇಮಕಾತಿಗೆ ಅಧಿಸೂಚನೆಯನ್ನು15 ಸೆಪ್ಟೆಂಬರ್ 2025ರಂದು ಪ್ರಕಟಿಸಲಾಗುತ್ತದೆ, ನೇಮಕಾತಿ ಅಧಿಸೂಚನೆಯನ್ನು ಶೀಘ್ರದಲ್ಲಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.rrbbnc.gov.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕೆಪಿಎಸ್‌ಸಿ ನೇಮಕಾತಿ

ಗ್ರೂಪ್ ಸಿ ಹುದ್ದೆಗಳ ನೇಮಕಾತಿ ಪರೀಕ್ಷೆ ಕೀ ಉತ್ತರ ಪ್ರಕಟ

ಕರ್ನಾಟಕ ಲೋಕಸೇವ ಆಯೋಗ ರಾಜ್ಯದಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಾದ (ಪದವಿಮಟ್ಟದ ಉಳಿಕೆಮೂಲವೃಂದದ) ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ 50 ಹುದ್ದೆಗಳು ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ 10 ಹುದ್ದೆಗಳ ನೇಮಕಾತಿಗೆ ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು 13 ಜುಲೈ 2025ರಂದು ನಡೆಸಲಾಗಿತ್ತು ಇದೀಗ ಪರೀಕ್ಷೆಯ ಕೀ ಉತ್ತರ ಪ್ರಕಟಿಸಿದೆ, ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 20 ಆಗಸ್ಟ್ 2025ರ ಒಳಗೆ ಅಂಚೆ ಮೂಲಕ ಸಲ್ಲಿಸಬಹುದಾಗಿದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ www.kpsc.kar.nic.in ಬೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕೆಪಿಎಸ್‌ಸಿ ನೇಮಕಾತಿ

ಪಿಡಿಒ ಹುದ್ದೆಗಳ ನೇಮಕಾತಿ ದಾಖಲೆ ಪರಿಶೀಲನೆ ಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹೈದರಾಬಾದ್-ಕರ್ನಾಟಕ ವೃಂದದ 97 ಹುದ್ದೆಗಳ ಭರ್ತಿಮಾಡಲು ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನವೆಂಬರ್ 2024ರಲ್ಲಿ ನಡೆಸಲಾಗಿತ್ತು ಇದೀಗ ಮೂಲ ದಾಖಲೆಗಳ ಪರಿಶೀಲನೆಗೆ (1:3) ಅರ್ಹರಾದ 284 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ ಮತ್ತು ದಾಖಲೆ ಪರಿಶೀಲನೆ ದಿನಾಂಕ ಸಮಯದ ಕುರಿತು ಅಧಿಕೃತ ವೆಬ್-ಸೈಟ್ ನಲ್ಲಿ ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ತಿಳಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ www.kpsc.kar.nic.in ಪ್ರವೇಶಿಸಿ ಅಥವಾ ಕೆಳಗಿನ ಲಿಂಕ್ ಕ್ಲಿಕ್ಕಿಸಿ ದಾಖಲೆ ಪರಿಶೀಲನೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ ಬೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕೆಪಿಟಿಸಿಎಲ್ ನೇಮಕಾತಿ

ಕಿರಿಯ ಪವರ್ ಮ್ಯಾನ್ ಹುದ್ದೆಗಳ ಆಯ್ಕೆ ಪಟ್ಟಿ ಪ್ರಕಟ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) 2760 ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ ಅಕ್ಟೋಬರ್ 2024 ರಲ್ಲಿ ಅರ್ಜಿ ಆಹ್ವಾನಿಸಿ ಅರ್ಹ ಅಭ್ಯಥಿಗಳಿಗೆ ಸಹನಶಕ್ತಿ ಪರೀಕ್ಷೆಯನ್ನು ಮೇ 2025ರಲ್ಲಿ ನಡೆಸಲಾಗಿತ್ತು ಇದೀಗ ಉಳಿಕೆ ಮೂಲ ವೃಂದದ ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮ್ಯಾನ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ ಮತ್ತು ಕಲ್ಯಾಣ ಕರ್ನಾಟಕ ಜೂನಿಯರ್ ಸ್ಟೇಷನ್ ಅಟೆಂಡೆಂಟ್ (ಕ.ಕ) ಮತ್ತು ಜೂನಿಯರ್ ಪವರ್‌ಮ್ಯಾನ್(ಕ.ಕ) ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://kptcl.karnataka.gov.in ಪ್ರವೇಶಿಸಿ ಆಯ್ಕೆಪಟ್ಟಿ ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎

ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ

ಕೆಪಿಎಸ್‌ಸಿ 78 ಎಸ್‌ಡಿಎ ನೇಮಕಾತಿ ಹೆಚ್ಚುವರಿ ಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗ ರಾಜ್ಯದ ವಿವಿಧ ನ್ಯಾಯಾಂಗ ಘಟಕಗಳಲ್ಲಿ ಖಾಲಿ ಇರುವ 575 (494+81 HK) ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಫೆಬ್ರವರಿ 2019ರಲ್ಲಿ ಅರ್ಜಿ ಆಹ್ವಾನಿಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಜೂನ್ 2019ರಲ್ಲಿ ನಡೆಸಿ ಅಂತಿಮ ನೇಮಕಾತಿ ಪಟ್ಟಿಯನ್ನು ಈ ಹಿಂದೆ ಪ್ರಕಟಗೊಳಿಸಿತ್ತು, ಇದೀಗ ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಿದೆ, ಹೈದ್ರಾಬಾದ್ ಕರ್ನಾಟಕ ವೃಂದದ 14 ಹುದ್ದೆಗಳು ಮತ್ತು ಉಳಿಕೆ ಮೂಲ ವೃಂದದ 64 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ ಪಟ್ಟಿಯನ್ನು ಆಯೋಗವು ವೆಬ್‌ಸೈಟ್ ನಲ್ಲಿ ಪ್ರಕಟಿಸಿದೆ, ಮತ್ತು ನಿಯಮಾನುಸಾರ 10% ಹೈದ್ರಾಬಾದ್ ಕರ್ನಾಟಕ ವೃಂದದ ಹೆಚ್ಚುವರಿ ಪಟ್ಟಿಯನ್ನೂ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.kpsc.kar.nic.in ಬೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎ ‎‎‎‎‎‎‎‎‎‎‎‎‎‎ ‎‎

ಕಾಲೇಜು ಶಿಕ್ಷಣ ಇಲಾಖೆ ನೇಮಕಾತಿ

ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸ್ನಾತಕೋತ್ತರ ಪದವಿ ಪಡೆದಿರಬೇಕು, ಹುದ್ದೆಗಳ ಸಂಖ್ಯೆಯನ್ನು ನಂತರ ಪ್ರಕಟಿಸಲಾಗುವುದು, ಹೆಚ್ಚುವರಿ ವಿದ್ಯಾರ್ಹತೆ ಮತ್ತು ಅನುಭವ ಇತರ ಮಾಹಿತಿಗೆ ಅಧಿಸೂಚನೆ ಗಮನಿಸಿ, ಮೆರಿಟ್ ಪಟ್ಟಿ ತಯಾರಿಸಿ ನೇಮಕಾತಿ ಮಾಡಲಾಗುವುದು, ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ದಿನಾಂಕ 05 ಆಗಸ್ಟ್ 2025ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ನೇಮಕಾತಿಯ ಕುರಿತು ಸಂಪೂರ್ಣ ಮಾಹಿತಿಗೆ ಅಧಿಕೃತ ವೆಬ್-ಸೈಟ್ https://dce.karnataka.gov.in ಬೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎ ‎‎‎‎‎‎‎‎‎‎‎‎‎‎ ‎‎ ‎‎‎‎‎‎‎‎‎‎‎‎‎‎ ‎‎

ಕೆಪಿಎಸ್‌ಸಿ ನೇಮಕಾತಿ

ಕೆಪಿಎಸ್‌ಸಿ ಗ್ರೂಪ್ ‘ಸಿ’ ಹುದ್ದೆಗಳ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಉಳಿಕೆ ಮೂಲ ವೃಂದದ ಗ್ರೂಪ್ ‘ಸಿ’ ಹುದ್ದೆಗಳಾದ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಇಂಜಿನಿಯರ್ 300 ಹುದ್ದೆಗಳು ಮತ್ತು ಸಾರ್ವಜನಿಕ ಗ್ರಂಥಾಲಯದಲ್ಲಿ ಖಾಲಿ ಇರುವ ಸಹಾಯಕ ಗ್ರಂಥಪಾಲಕ 13 ಹುದ್ದೆಗಳಿಗೆ ದಿನಾಂಕ 15 ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕನ್ನಡ ಭಾಷಾ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದೆ, ದಿನಾಂಕ 16 ಆಗಸ್ಟ್ 2025ರಂದು ಕನ್ನಡ ಭಾಷಾ ಪರೀಕ್ಷೆ ನಡೆಸಲು ನಿಗದಿಪಡಿಸಿ ಪ್ರಕಟಣೆ ಪ್ರಕಟಿಸಲಾಗಿದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ https://kpsc.kar.nic.in ಬೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎ ‎‎‎‎‎‎‎‎‎‎‎‎‎‎ ‎‎ ‎‎‎‎‎‎‎‎‎‎‎‎‎‎ ‎‎

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೀ ಉತ್ತರ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕರ್ನಾಟಕ ಸರ್ಕಾರ ವಿವಿಧ ನೇಮಕಾತಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಿಂದುಳಿದ ವರ್ಗ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್/ ಗ್ರೂಪ್ ಸಿ/ ಆರ್ ಆರ್ ಬಿ/ ಎಸ್ ಎಸ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಿ ಅಭ್ಯರ್ಥಿಗಳ ನಿಯೋಜಿಸುವ ಸಂಬಂಧ ದಿನಾಂಕ 19 ಜುಲೈ 2025 ಪ್ರವೇಶ ಪರೀಕ್ಷೆ ನಡೆಸಿ ಈ ಹಿಂದೆ ತಾತ್ಕಾಲಿಕ ಕೀ ಉತ್ತರ ಪ್ರಕಟಿಸಲಾಗಿತ್ತು ಇದೀಗ ಅಂತಿಮ ಕೀ ಉತ್ತರ ಪ್ರಕಟಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ಕೀ ಉತ್ತರ ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎ ‎‎‎‎‎‎‎‎‎‎‎‎‎‎ ‎‎ ‎‎‎‎‎‎‎‎‎‎‎‎‎‎ ‎‎

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸಂಘ ನೇಮಕಾತಿ

35 ಶುಶ್ರೂಷಕರು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಮೈಸೂರು ಜಿಲ್ಲೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೈಸೂರು ಜಿಲ್ಲೆಯ ವೈದ್ಯಕೀಯ ಕಾಲೇಜಿನ ಖಾಲಿ ಇರುವ 35 ಶುಶ್ರೂಷಕರು ಹುದ್ದೆಗಳನ್ನು ಗುತ್ತಿಗೆ ಆಧಾರದಮೇಲೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಸಂಸ್ಥೆಯಿಂದ ಜಿ.ಎನ್.ಎಂ/ ಬಿ.ಎಸ್.ಸಿ ನರ್ಸಿಂಗ್ ಪದವಿ ಹೊಂದಿರಬೇಕು. ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌ನಲ್ಲಿ ನೊಂದಣಿಯಾಗಿರಬೇಕು, ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 29 ಜುಲೈ 2025ರಂದು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಕಛೇರಿ ಮೈಸೂರು ಜಿಲ್ಲೆ ಇಲ್ಲಿ ಬೆಳಿಗ್ಗೆ 10:30ಕ್ಕೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://mysore.nic.in ಭೇಟಿ ನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎

ಕೆಪಿಎಸ್‌ಸಿ ನೇಮಕಾತಿ

ಗ್ರೂಪ್ ‘ಸಿ’ ನೇಮಕಾತಿ ಕೀ ಉತ್ತರ ಪ್ರಕಟ

ಕರ್ನಾಟಕ ಲೋಕ ಸೇವಾ ಆಯೋಗ ಉಳಿಕೆ ಮೂಲ ವೃಂದದ 313 ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿಗೆ ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮಾರ್ಚ್ 2025ರಲ್ಲಿ ನಡೆಸಿ ತಾತ್ಕಾಲಿಕ ಕೀ ಉತ್ತರನ್ನು ಈ ಹಿಂದೆ ಪ್ರಕಟಿಸಲಾಗಿತ್ತು ಇದೀಗ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಕೀ ಉತ್ತರವನ್ನು ಆಯೋಗವು ಪ್ರಕಟಿಸಿದೆ ಮತ್ತು ಕರ್ನಾಟಕ ಲೋಕ ಸೇವಾ ಆಯೋಗ ಉಳಿಕೆ ಮೂಲ ವೃಂದದ 70 ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳ ನೇಮಕಾತಿಗೆ ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮೇ 2025ರಲ್ಲಿ ನಡೆಸಿ ತಾತ್ಕಾಲಿಕ ಕೀ ಉತ್ತರನ್ನು ಈ ಹಿಂದೆ ಪ್ರಕಟಿಸಲಾಗಿತ್ತು ಇದೀಗ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಕೀ ಉತ್ತರವನ್ನು ಆಯೋಗವು ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kpsc.kar.nic.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎ ‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎

ರೈಲ್ವೆ ನೇಮಕಾತಿ ಮಂಡಳಿ ನೇಮಕಾತಿ

434 ಹುದ್ದೆಗಳ ನೇಮಕಾತಿ

ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ರೈಲ್ವೆ ಪ್ಯಾರಾಮೆಡಿಕಲ್ 434 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುವುದರ ಕುರಿತು ಪತ್ರಿಕಾ ಪ್ರಕಟಣೆ ಪ್ರಕಟಿಸಿದೆ, ಬೆಂಗಳೂರು ರೈಲ್ವೆ ಸೇರಿದಂತೆ ದೇಶಾದ್ಯಂತ ವಿವಿಧ ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ನರ್ಸಿಂಗ್ ಹುದ್ದೆಗಳು, ಸೂಪರಿಂಟೆಂಡೆಂಟ್ ಹುದ್ದೆಗಳು, ಡಯಾಲಿಸಿಸ್ ತಂತ್ರಜ್ಞ ಹುದ್ದೆಗಳು, ಆರೋಗ್ಯ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ ಹುದ್ದೆಗಳು, ಔಷಧಿಕಾರ ಹುದ್ದೆಗಳು, ರೇಡಿಯೋಗ್ರಾಫರ್ ಎಕ್ಸ್-ರೇ ತಂತ್ರಜ್ಞ ಹುದ್ದೆಗಳು, ಇಸಿಜಿ ತಂತ್ರಜ್ಞ ಹುದ್ದೆಗಳು, ಲಾಬ್ ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು 09 ಆಗಸ್ಟ್ 2025ರಂದು ಪ್ರಕಟಿಸಲಾಗುತ್ತದೆ, ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಜಿಎನ್‌ಎಂ/ಬಿ.ಎಸ್‌ಸಿ ನರ್ಸಿಂಗ್/ ಪದವಿ / ಫಾರ್ಮಸಿಯಲ್ಲಿ ಡಿಪ್ಲೊಮಾ/ ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ /ರಸಾಯನಶಾಸ್ತ್ರದಲ್ಲಿ ಬಿ.ಎಸ್ಸಿ/ ಡಿಎಂಎಲ್ಟಿ / ಬಿ.ಎಸ್ಸಿ ಮತ್ತು ಹಿಮೋಡಯಾಲಿಸಿಸ್‌ನಲ್ಲಿ ಡಿಪ್ಲೊಮಾ/ ಸಂಬಂಧಿತ ವಿಭಾಗದಲ್ಲಿ ಪದವಿ / ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು, ನೇಮಕಾತಿ ಅಧಿಸೂಚನೆಯನ್ನು ಶೀಘ್ರದಲ್ಲಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.rrbbnc.gov.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎ ‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎‎‎‎‎‎ ‎‎

ಕಂದಾಯ ಆಯುಕ್ತಾಲಯ ನೇಮಕಾತಿ

ಲಾ ಕ್ಲರ್ಕ್/ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕಂದಾಯ ಆಯುಕ್ತಾಲಯ ಕಾನೂನು ಕೋಶ ವಿಭಾಗಕ್ಕೆ 04 ಲಾ ಕ್ಲರ್ಕ್/ಅಸಿಸ್ಟೆಂಟ್ ಹುದ್ದೆಗಳ ತಾತ್ಕಾಲಿಕ ಒಪ್ಪಂದದ ಆಧಾರದಮೇಲೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಲಾ ಇಂಟರ್ನ್ ಅಥವಾ ಕಾನೂನು ಪದವಿ ಪಡೆದಿರಬೇಕು, ಮಾಸಿಕ ವೇತನ 20000 ರೂ ನೀಡಲಾಗುವುದು, ಆಸಕ್ತ ಅರ್ಹ ಅಭ್ಯರ್ಥಿಗಳು ಕಂದಾಯ ಆಯುಕ್ತಾಲಯ ಕಾರ್ಯಾಲಯಕ್ಕೆ ದಿನಾಂಕ 31 ಜುಲೈ 2025ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ: 080-22032691 ಸಂಪರ್ಕಿಸಿ ಅಥವಾ ಕಂದಾಯ ಆಯುಕ್ತಾಲಯ 711, 7ನೇ ಮಹಡಿ, 2ನೇ ಗೇಟ್, ಬಹುಮಹಡಿಗಳ ಕಟ್ಟಡ, ಡಾ.ಬಿ.ಆರ್ ಅಂಬೇಡ್ಕರ್ ವೀದಿ, ಬೆಂಗಳೂರು 560001 ಕಛೇರಿ ಬೇಟಿ ನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎

ಕೆಪಿಟಿಸಿಎಲ್ ನೇಮಕಾತಿ

ಕಿರಿಯ ಪವರ್ ಮ್ಯಾನ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) 2760 ಜೂನಿಯರ್ ಸ್ಟೇಷನ್ ಅಟೆಂಡೆಂಟ್ ಮತ್ತು ಜೂನಿಯರ್ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ ಅಕ್ಟೋಬರ್ 2024 ರಲ್ಲಿ ಅರ್ಜಿ ಆಹ್ವಾನಿಸಿ ಅರ್ಹ ಅಭ್ಯಥಿಗಳಿಗೆ ಸಹನಶಕ್ತಿ ಪರೀಕ್ಷೆಯನ್ನು ಮೇ 2025ರಲ್ಲಿ ನಡೆಸಲಾಗಿತ್ತು ಇದೀಗ ಕಲ್ಯಾಣ ಕರ್ನಾಟಕ ಜೂನಿಯರ್ ಸ್ಟೇಷನ್ ಅಟೆಂಡೆಂಟ್ (ಕ.ಕ) ಮತ್ತು ಜೂನಿಯರ್ ಪವರ್‌ಮ್ಯಾನ್(ಕ.ಕ) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://kptcl.karnataka.gov.in ಬೇಟಿನೀಡಿರಿ ಆಯ್ಕೆಪಟ್ಟಿ ನೋಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎

ಕೆಪಿಎಸ್‌ಸಿ ನೇಮಕಾತಿ

ಗ್ರೂಪ್ ಬಿ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಪ್ರವೇಶ ಪತ್ರ

ಕರ್ನಾಟಕ ಲೋಕಸೇವ ಆಯೋಗ ರಾಜ್ಯದಲ್ಲಿ ಖಾಲಿ ಇರುವ ಗ್ರೂಪ್ ಬಿ ಹುದ್ದೆಗಳಾದ ಭೂ ವಿಜ್ಞಾನಿ ಹುದ್ದೆಗಳು, ಸಹಾಯಕ ನಿರ್ದೇಶಕರು ಹುದ್ದೆಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹುದ್ದೆಗಳು, ಸಹಾಯಕ ಇಂಜಿನಿಯರ್, ಕಾರ್ಖಾನೆ ನಿರ್ದೇಶಕರು, ಕಲ್ಯಾಣಾಧಿಕಾರಿಗಳು ಹುದ್ದೆಗಳು ಸೇರಿದಂತೆ ಒಟ್ಟು 50 ಹೈದರಾಬಾದ್ ಕರ್ನಾಟಕ ವೃಂದ ಹುದ್ದೆಗಳ ನೇಮಕಾತಿಗೆ ಏಪ್ರಿಲ್ 2024ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು  ಇದೀಗ ಈ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡ ಭಾಷಾ ಪರೀಕ್ಷೆಯನ್ನು ದಿನಾಂಕ 26 ಜುಲೈ 2025ರಂದು ನಡೆಸಲು ನಿಗದಿಪಡಿಸಿ ಪ್ರವೇಶಪತ್ರವನ್ನು ಬಿಡುಗಡೆಮಾಡಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://kpsc.kar.nic.in ಪ್ರವೇಶಿಸಿ ಪ್ರವೇಶ ಪತ್ರ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kpsc.kar.nic.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎

ಕೆಪಿಎಸ್‌ಸಿ ನೇಮಕಾತಿ

ಗ್ರೂಪ್ ಸಿ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಪ್ರವೇಶ ಪತ್ರ

ಕರ್ನಾಟಕ ಲೋಕಸೇವ ಆಯೋಗ ರಾಜ್ಯದಲ್ಲಿ ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳಾದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ 50 ಹುದ್ದೆಗಳು ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ 10 ಹುದ್ದೆಗಳ ನೇಮಕಾತಿಗೆ ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆ ಪ್ರವೇಶ ಪತ್ರವನ್ನು ಪ್ರಕಟಿಸಿದೆ, 12, 13 ಜುಲೈ 2025ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ನಿಗದಿಪಡಿಸಿ ಪರೀಕ್ಷೇಯ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ, ಅಭ್ಯರ್ಥಿಯು ಅಧಿಕೃತ ವೆಬ್‌ಸೈಟ್‌ https://www.kpsc.kar.nic.in ಭೇಟಿ ನೀಡಿ ಅಪ್ಲಿಕೇಶನ್ ಐಡಿ ಮತ್ತು ಜನ್ಮದಿನಾಂಕ ನಮೂದಿಸಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಬಹುದಾಗಿದೆ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್-ಸೈಟ್ www.kpsc.kar.nic.in ಬೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ 

ಗ್ರಾಮ ಒನ್ ತೆರೆಯಲು ಅರ್ಜಿ ಆಹ್ವಾನ

ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ

ಗ್ರಾಮ ಒನ್ ಕರ್ನಾಟಕ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಎಲ್ಲಾ ಇಲಾಖೆಗಳ ನಾಗರಿಕ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಸ್ವಂತ ಗ್ರಾಮದಲ್ಲಿ ತಲುಪಿಸುವ ಗುರಿಯನ್ನು ಹೊಂದಿರುವ ಯೋಜನೆಯಾಗಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ, ಪ್ರಸ್ತುತ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕಲಬುರಗಿ, ಕೊಡಗು, ಮಂಡ್ಯ, ಮೈಸೂರು, ಯಾದಗಿರಿ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಗಳ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಡಿಪ್ಲೊಮಾ/ಐಟಿಐ/ಪಿಯುಸಿ II/ಪದವೀಧರರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಕನ್ನಡ, ಇಂಗ್ಲಿಷ್ ಎರಡರಲ್ಲೂ ಟೈಪಿಂಗ್ ಮಾಡಲು ಪರಿಣತಿ ಹೊಂದಿರಬೇಕು. ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ದಿನಾಂಕ 15 ಜುಲೈ 2025ರ ಒಳಗೆ ಅರ್ಜಿ ಸಲ್ಲಿಸಬೇಕು, ಜಿಲ್ಲೆಯ ಯಾವ ಭಾಗದಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಯಲು ವೆಬ್‌ಸೈಟ್ https://kal-mys.gramaone.karnataka.gov.in ಭೇಟಿನೀಡಿ ಜಿಲ್ಲೆ-ತಾಲೂಕು-ಗ್ರಾಮ ಆಯ್ಕೆ ಮಾಡಿ ಮಾಹಿತಿ ತಿಳಿಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kal-mys.gramaone.karnataka.gov.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎  ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ 

ಕೆಪಿಎಸ್‌ಸಿ ನೇಮಕಾತಿ

386 ಭೂಮಾಪಕರ ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕ ತಡೆ

ಕರ್ನಾಟಕ ಲೋಕ ಸೇವಾ ಆಯೋಗ, ಭೂಮಾಪನ ಕಂದಾಯ ವ್ಯವಸ್ಥೆ ಭೂದಾಖಲೆಗಳ ಇಲಾಖೆಯಲ್ಲಿನ “ಭೂಮಾಪಕರ ಹುದ್ದೆಗಳ” ಉಳಿಕೆ ಮೂಲ ವೃಂದದ 296 ಮತ್ತು ಹೈದ್ರಾಬಾದ್ ಸ್ಥಳೀಯ ವೃಂದದ 90 ಹುದ್ದೆಗಳ ನೇಮಕಾತಿಗೆ 2024ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಆದರೆ ಇದೀಗ ಸರ್ಕಾರದ ಸುತ್ತೋಲೆಯನ್ವಯ ದಿನಾಂಕ 25 ನವೆಂಬರ್ 2024ರ ಅಧಿಸೂಚನೆಗಳನ್ನು ಕೂಡಲೇ ಹಿಂಪಡೆಯುವಂತೆ ಸೂಚಿಸಿದ್ದು, ಸದರಿ ಸೂಚನೆಗಳು 28 ಅಕ್ಟೋಬರ್ 2024 ರಿಂದ ಅನ್ವಯವಾಗುವುದಾಗಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಸದರಿ ನೇಮಕಾತಿ ಕುರಿತಾದ ಕಾರ್ಯಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು ಸೂಕ್ತ” ಎಂದು ನಿರ್ಣಯಿಸಲಾಗಿರುತ್ತದೆ, ಈ ಕುರಿತು ಅಧಿಕೃತ ಪ್ರಕಟಣೆಯನ್ನು ಕೆಪಿಎಸ್‌ಸಿ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kpsc.kar.nic.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎

ಕೆಪಿಎಸ್‌ಸಿ ನೇಮಕಾತಿ

384 ಕೆಎಎಸ್‌ ಹುದ್ದೆಗಳ ನೇಮಕಾತಿ ಅಧಿಸೂಚನೆ ರದ್ದು

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ 384 ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ನೇಮಕಾತಿಗೆ ಮಾರ್ಚ್ 2024ರಲ್ಲಿ ಅರ್ಜಿ ಆಹ್ವಾನಿಸಿ ಡಿಸೆಂಬರ್ 2024ರಲ್ಲಿ ಪೂರ್ವಭಾವಿ ಪರೀಕ್ಷೆಯನ್ನು ನಡೆಸಿ ಅರ್ಹ ಅಭ್ಯರ್ಥಿಗಳಿಗೆ ಮೇ 2025ರಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗಿತ್ತು ಆದರೆ ಇದೀಗ ಸರಕಾರಿ ನೇಮಕಾತಿಗಳಲ್ಲಿ ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಳ ಮಾಡಿದ ರಾಜ್ಯ ಸರಕಾರದ ಆದೇಶದ ಆಧಾರದ ಮೇಲೆ 384 ಗೆಜೆಟೆಡ್‌ ಪ್ರೊಬೇಷನರ್‌ ನೇಮಕ ಅಧಿಸೂಚನೆಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ರದ್ದುಪಡಿಸಿದೆ, ಸರಕಾರ ಈಗ ನೇಮಕ ಪ್ರಕ್ರಿಯೆ ಊರ್ಜಿತಗೊಳಿಸಬೇಕಾದರೆ ಕೆಎಟಿ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://kpsc.kar.nic.in ಭೇಟಿನೀಡಿರಿ.

‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎  ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎

‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎

ಕನಾ೯ಟಕ ಲೋಕಸೇವಾ ಆಯೋಗ

ಕೆಪಿಎಸ್‌ಸಿ 2025ರ ನೇಮಕಾತಿ ಪರೀಕ್ಷೆ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) 2024ರಲ್ಲಿ ಗ್ರೂಪ್-ಎ, ಗ್ರೂಪ್-ಬಿ ಮತ್ತು ಗ್ರೂಪ್-ಸಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಈ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.kpsc.kar.nic.in ಪ್ರವೇಶಿಸಿ ಅಥವಾ ಕೆಳಗಿನ ಲಿಂಕ್ ಕ್ಲಿಕ್ಕಿಸಿ ಪರೀಕ್ಷಾ ದಿನಾಂಕ, ಸಮಯ, ಹುದ್ದೆಯ ಹೆಸರು ಮತ್ತು ನೇಮಕಾತಿ ಇಲಾಖೆ ಇತರ ಮಾಹಿತಿಯನ್ನು ನೋಡಬಹುದಾಗಿದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.kpsc.kar.nic.in ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎‎‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎

ಕೆಇಎ ನೇಮಕಾತಿ

2025ರಲ್ಲಿ ರಾಜ್ಯ ಸರ್ಕಾರದ ನೇಮಕಾತಿಗಳು

ಕರ್ನಾಟಕ ರಾಜ್ಯ ಸರ್ಕಾರ 2025ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ರದ ಮೂಲಕ ನಡೆಸಲಾಗುವ ನೇಮಕಾತಿ ವಿವರವನ್ನು ಪ್ರಕಟಿಸಿದೆ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಬಿಇ, ಬಿಟೆಕ್ ಎಂಬಿಎ ಸೇರಿದಂತೆ ಇತರೆ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಮುಂಬರಲಿರುವ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ, 747 ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಸರ್ಕಾರದ ಅನುಮತಿ ಪಡೆಯುತ್ತಿದ್ದಂತೆ ಅರ್ಜಿ ಆಹ್ವಾನಿಸಲಾಗುತ್ತದೆ, ಹುದ್ದೆಯ ಹೆಸರು, ಇಲಾಖೆ, ಹುದ್ದೆಗಳ ಸಂಖ್ಯೆ ಇತರ ವಿವರವನ್ನು ಪ್ರಕಟಿಸಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea ಪ್ರವೇಶಿಸಿ ಅಥವಾ ಕೆಳಗಿನ ಲಿಂಕ್ ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎

ಕಂದಾಯ ಇಲಾಖೆ ನೇಮಕಾತಿ

1000 ಗ್ರಾಮ ಆಡಳಿತ ಅಧಿಕಾರಿ ಅಂತಿಮ ಅಂಕ ಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಏಪ್ರಿಲ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು 27 ಅಕ್ಟೋಬರ್ 2024ರಂದು ನಡೆಸಲಾಗಿತ್ತು ಇದೀಗ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 35% ರಷ್ಟು ಅಂಕಗಳಿಸಿ ಅರ್ಹರಾದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಪ್ರಕಟಿಸಲಾಗಿದೆ, ಅಂತಿಮ ಅಂಕಪಟ್ಟಿಯಲ್ಲಿ ಗಳಿಸಿದ ಅಂಕಗಳು ಮತ್ತು ಮೀಸಲಾತಿ ನಿಯಮಾನುಸಾರ ಖಾಲಿ ಇರುವ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎ ‎‎‎‎‎‎‎‎‎ ‎‎ ‎‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎ ‎‎‎‎‎‎‎‎‎ ‎‎ ‎‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎‎ ‎‎ ‎‎‎ ‎‎‎‎‎ ‎‎‎‎‎‎‎‎‎ ‎‎ ‎‎‎

ಕಂದಾಯ ಇಲಾಖೆ ನೇಮಕಾತಿ

1000 ಗ್ರಾಮ ಆಡಳಿತ ಅಧಿಕಾರಿ ತಾತ್ಕಾಲಿಕ ಅಂಕ ಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಏಪ್ರಿಲ್ 2024ರಲ್ಲಿ ಅರ್ಜಿ ಆಹ್ವಾನಿಸಿ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು 27 ಅಕ್ಟೋಬರ್ 2024ರಂದು ನಡೆಸಲಾಗಿತ್ತು ಇದೀಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲಾಗಿದೆ, ಆಕ್ಷೇಪಣೆಗಳು ಇದ್ದರೆ 28 ನವೆಂಬರ್ 2024ರ ಒಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ https://cetonline.karnataka.gov.in/kea ಅರ್ಜಿ ಸಂಖ್ಯೆ ನಮೂದಿಸಿ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ವಿವರವನ್ನು ನೋಡಬಹುದಾಗಿದೆ, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea ಭೇಟಿನೀಡಿರಿ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

ಅಂತಿಮ ಕೀ ಉತ್ತರ : ಕ್ಲಿಕ್ಕಿಸಿ

‎‎ ‎‎‎‎‎ ‎‎‎‎‎‎‎‎‎ ‎‎ ‎‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎‎ ‎‎ ‎‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎‎‎‎‎ ‎‎ ‎‎‎‎‎ ‎‎‎‎‎‎ ‎‎ ‎‎‎‎‎‎ ‎‎ ‎‎‎‎‎ ‎‎‎‎‎‎ ‎‎ ‎‎‎‎‎‎ ‎‎ ‎‎‎‎‎ ‎‎‎‎‎‎ ‎‎ ‎‎‎‎‎‎ ‎‎ ‎‎‎‎‎‎ ‎‎ ‎‎‎‎‎ ‎‎‎ ‎‎ ‎‎‎‎‎‎ ‎‎ ‎‎‎‎‎‎ ‎‎ ‎‎‎‎‎‎ ‎‎ ‎‎‎‎‎ ‎‎‎ ‎‎ ‎‎‎ ‎‎ ‎‎‎‎‎‎ ‎‎ ‎‎‎ ‎‎ ‎‎‎ ‎‎ ‎‎‎‎‎‎‎ ‎ ‎‎‎ ‎‎ ‎‎‎ ‎‎ ‎‎‎ ‎‎ ‎‎‎‎‎ ‎‎‎

‎‎‎‎ ‎‎‎‎ ‎‎‎‎ ‎‎‎‎ ‎‎‎‎ ‎‎‎‎ ‎‎‎‎ ‎‎‎‎ ‎‎‎‎ ‎‎‎‎ ‎‎‎‎ ‎‎‎‎‎ ‎‎‎‎ ‎‎‎‎ ‎‎‎‎ ‎‎‎‎‎ ‎‎‎‎ ‎‎‎‎ ‎‎‎‎ ‎‎‎‎‎ ‎‎‎‎ ‎‎‎‎ ‎‎‎‎‎ ‎‎‎‎ ‎‎‎‎ ‎‎‎‎‎ ‎‎‎‎‎ ‎‎‎‎ ‎‎‎‎ ‎‎‎‎ ‎‎‎‎ ‎‎‎ ‎‎‎ ‎‎‎‎ ‎‎‎‎ ‎‎‎‎ ‎‎‎‎ ‎‎‎‎ ‎‎‎ ‎‎‎ ‎‎ ‎‎‎ ‎

ಕರ್ನಾಟಕ ಅಂಚೆ ವೃತ್ತ

1940 ಜಿಡಿಎಸ್ ಹುದ್ದೆಗಳ ಫಲಿತಾಂಶ

ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತದಲ್ಲಿ ಖಾಲಿ ಇರುವ 1940 ಗ್ರಾಮೀಣ್ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳನ್ನು ಭರ್ತಿ ಮಾಡಲು ಜುಲೈ 2024ರಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಿದೆ, ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ https://indiapostgdsonline.gov.in ಪ್ರವೇಶಿಸಿ ಅಥವಾ ಕೆಳಗಿನ ಲಿಂಕ್ ಕ್ಲಿಕ್ಕಿಸಿ ದಾಖಲೆ ಪರಿಶೀಲನೆಗೆ ಅರ್ಹತಾ ಪಟ್ಟಿ, ಅಭ್ಯರ್ಥಿಗಳ ಹೆಸರು, ಹುದ್ದೆಯ ಹೆಸರು ಇತರ ವಿವರ ನೋಡಬಹುದಾಗಿದೆ.

ಹೆಚ್ಚಿನ ಮಾಹಿತಿಗೆ : ಕ್ಲಿಕ್ಕಿಸಿ

‎‎‎ ‎‎ ‎‎‎ ‎‎
.
.

.

error: Content is protected !!